ಜಿಯೊಗೆ ಜಾರುತ್ತಿರುವ ಗ್ರಾಹಕರನ್ನು ಉಳಿಸಿಕೊಳ್ಳಲು ವೊಡಾಫೋನ್ ಹೊಸ ‘ಪ್ಲಾನ್’

ಈ ಸುದ್ದಿಯನ್ನು ಶೇರ್ ಮಾಡಿ

Jiyo

ನವದೆಹಲಿ, ಸೆ.28: ರಿಲಯನ್ಸ್ ಜಿಯೋ ಟೆಲಿಕಾಂ ದಾಳಿಯನ್ನು ಎದುರಿಸಲು ಇತರೆ ಟೆಲಿಕಾಂ ಸಂಸ್ಥೆಗಳೂ ಸಹ ಸ್ಪರ್ಧೆಗಿಳಿದಿವೆ. ಈಗ ವೊಡಾಫೋನ್ ಸರದಿ, ಜಿಯೋ ಗೆ ಜಾರಿ ಹೋಗುತ್ತಿರುವ ಗ್ರಾಹಕರನ್ನು ಉಳಿಸಿಕೊಳ್ಳಲು ಬಿಗ್ ಡಾಟಾ ಆಫರ್ ನೀಡಿದೆ. ಇದರಿಂದ ವೊಡಾಫೋನ್ ಗ್ರಾಹಕರೂ ಸಹ ಫುಲ್ ಖುಷ್ ಆಗಿದ್ದಾರೆ. ಉಚಿತ ಆಫರ್ ಸ್ಪರ್ಧೆ ಎದುರಿಸಲು ವೊಡಾಫೋನ್ ಹೊಸ ಯೋಜನೆ ಪರಿಚಯಿಸಿದೆ. ಒಂದು ಜಿ.ಬಿ. ಡೇಟಾ ಪ್ಲಾನ್ ನ ದರಕ್ಕೆ 10 ಜಿ.ಬಿ 4ಜಿ ಮೊಬೈಲ್ ಇಂಟರ್ ನೆಟ್ ಸೇವೆ ಒದಗಿಸಲಿದೆ. ಈ ಯೋಜನೆ ಅಡಿ ಹೊಸ ಸ್ಮಾರ್ಟ್ ಫೋನ್ ಇರುವ ವೊಡಾಫೋನ್ ಗ್ರಾಹಕರು 1 ಜಿ.ಬಿ ಪ್ಲಾನ್ ರೀಚಾರ್ಜ್ ಮಾಡಿಸಿದರೆ ಹೆಚ್ಚುವರಿಯಾಗಿ 9 ಜಿ.ಬಿ. ಡೇಟಾ ದೊರೆಯಲಿದೆ.

ವೊಡಾಫೋನ್ ಎಲ್ಲೆಲ್ಲಿ ಸ್ವಂತವಾಗಿ 3ಜಿ, 4ಜಿ ಸೇವೆಯನ್ನು ಒದಗಿಸುತ್ತದೋ ಅಲ್ಲಿ ಈ ಯೋಜನೆಯು ಅನ್ವಯವಾಗುತ್ತದೆ. ಪ್ರೀ ಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಗ್ರಾಹಕರು ಇದರ ಲಾಭ ಪಡೆಯಬಹುದು, ಡಿಸೆಂಬರ್ 31ರವರೆಗೆ ಈ ಯೋಜನೆ ಜಾರಿಯಲ್ಲಿರುತ್ತದೆ. ಅಂದ ಹಾಗೆ, ರಿಲಯನ್ಸ್ ಜಿಯೋ ಅನಿಯಮಿತ ಉಚಿತ ಕರೆಗಳು ಹಾಗೂ ಅನಿಯಮಿತ 4ಜಿ ಮೊಬೈಲ್ ಇಂಟರ್ ನೆಟ್ ಸೇವೆಯನ್ನು ಡಿಸೆಂಬರ್ 31ರ ವರೆಗೆ ಒದಗಿಸುವುದಾಗಿ ಈಗಾಗಲೇ ಘೋಷಿಸಿದೆ. ಗ್ರಾಹಕರು 4ಜಿ ಮೊಬೈಲ್ ಹ್ಯಾಂಡ್ ಸೆಟ್ ಗಳಿಗೆ ಬದಲಾಗಲು ಇದು ಸಕಾರಣ. ಈ ಮೂಲಕ ವೊಡಾಫೋನ್ ನ ಸೂಪರ್ ನೆಟ್ ಅನುಭವವನ್ನು ಸಂಪೂರ್ಣವಾಗಿ ಪಡೆಯಲು ಗ್ರಾಹಕರಿಗೆ ಒಂದು ಅವಕಾಶ ಎಂದು ವೊಡಾಫೋನ್ ಇಂಡಿಯಾದ ವಾಣಿಜ್ಯ ವಿಭಾಗದ ನಿರ್ದೇಶಕ ಸಂದೀಪ್ ಕಟಾರಿಯಾ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin