ರಸ್ತೆ ತೆರವು : ವ್ಯಾಪಾರಿಗಳಿಗೆ ತೊಂದರೆ

ಈ ಸುದ್ದಿಯನ್ನು ಶೇರ್ ಮಾಡಿ

t--narasipura

ತಿ.ನರಸೀಪುರ, ಸೆ.28- ಪುರಸಭೆ ಅಧಿಕಾರಿಗಳು ಏಕಾ ಏಕಿ ದಿಢೀರ್ ಎಂದು ಲಿಂಕರಸ್ತೆ, ಮಾರ್ಕೆಟ್ ಬಳಿಯ ರಸ್ತೆ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿರುವುದರಿಂದ ಇದನ್ನೇ ನಂಬಿ ಜೀವನ ನಡೆಸುತ್ತಿದ್ದ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ ಎಂದು ರಸ್ತೆ ಬದಿ ವ್ಯಾಪಾರಸ್ಥರ ಸಂಘದ ಮಾಜಿ ಆಧ್ಯಕ್ಷ ಮಹೇಶ್, ಕರಿಯಪ್ಪಆರೋಪಿಸಿದ್ದಾರೆ.ಕಳೆದ ಸೋಮವಾರ ರಸ್ತೆ ಬದಿ ವ್ಯಾಪಾರಸ್ಥರನ್ನು ಸುಗಮ ಸಂಚಾರದ ಹಿನ್ನಲೆಯಲ್ಲಿ ಅಧಿಕಾರಿಗಳು ದಿಢೀರ್ ಎಂದು ತೆರವುಗೊಳಿಸಿ ಲಿಂಕರಸ್ತೆಯ ಮಾಂಸ, ಮೀನು ಮಾರಾಟ ಸ್ಥಳದಲ್ಲಿ ವ್ಯಾಪಾರ ನಡೆಸುವಂತೆ ಸೂಚಿಸಿದ್ದು, ಆದರೆ ಇಲ್ಲಿ ಒಟ್ಟಿಗೆ ಎಲ್ಲರೂ ಇರುವುದರಿಂದ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಈ ವ್ಯಾಪಾರವನ್ನೇ ನಂಬಿ ಕೆಲವು ಕಾರ್ಯ ನಿಮಿತ್ತ ಕೆಲಸಗಳಿಗೆ ಸ್ವಸಹಾಯ ಸಂಘಗಳು, ಮಹಿಳಾ ಸಂಘಗಳು ಹಾಗೂ ಇನ್ನಿತರ ಲೇವಾ ದೇವಿ ಸಂಸ್ಥೆಗಳಿಂದ ಸಾಲ ಪಡೆದಿರುತ್ತೇವೆ. ಇಲ್ಲಿ ವ್ಯಾಪಾರ ನಡೆಯದೇ ಇರುವುದರಿಂದ ಸಾಲ ತೀರಿಸಲು ಮತ್ತು ಜೀವನ ನಿರ್ವಹಣೆಗೆ ತೊಂದರೆಯಾಗಿದೆ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದರು.ಅಧಿಕಾರಿಗಳು ನಮಗೆ ಕಾಲವಕಾಶ ನೀಡಿ ತೆರವುಗೊಳಿಸಿದ್ದರೇ ನಮಗೆ ತೊಂದರೆಯಾಗುತ್ತಿರಲಿಲ್ಲ. ಆದ್ದರಿಂದ ಅಧಿಕಾರಿಗಳು ನಮ್ಮ ಸಮಸ್ಯೆಯನ್ನು ಪರಿಗಣಿಸಿ ಕಾಲವಕಾಶ ನೀಡುವುದರೊಂದಿಗೆ ರಸ್ತೆ ಬದಿಯಲ್ಲಿಯೇ ಸಂಚಾರಕ್ಕೆ ಅಡಚಣೆಯಾಗದಂತೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿಕೊಡಬೇಕು. ಹಾಗೂ ಹಾಲಿ ನಿಗದಿಪಡಿಸಿರುವ ಸ್ಥಳದಲ್ಲಿ ಸುಸರ್ಜಿತ ಮಾರುಕಟ್ಟೆಯನ್ನೇ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.ಮಾದೇಶ್, ನಾಗರಾಜು, ಷಣ್ಮುಖ, ಮಹದೇವ, ಮತ್ತಿತರರು ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin