ವಿಜೃಂಭಣೆಯ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

17

ಹುನಗುಂದ,ಸೆ.28- ಶ್ರೀ ಮಾರುತೇಶ್ವರ ಹಾಗೂ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವವು ಸಕಲ ವಾದ್ಯ, ಮೇಳದೊಂದಿಗೆ ವಿಜೃಂಭಣೆ ಯಿಂದ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ನಡೆಯಿತು. ಬಸವೇಶ್ವರರ ಭಾವಚಿತ್ರ, ಪಾಲಕಿಯನ್ನು ಪಾದಗಟ್ಟೆಯವರೆಗೆ ಎಳೆದು ಮರಳಿ ದೇವಸ್ಥಾನದ ಮುಂಭಾಗಕ್ಕೆ ತಲುಪಿದ ನಂತರ ಕಳಸದ ಮೆರವಣಿಗೆಯು ಗ್ರಾಮದಲ್ಲಿ ಸಂಚಿರಿಸಿದ ನಂತರ ಕಳಸವನ್ನು ರಥಕ್ಕೂ ಏರಿಸಲಾಯಿತು. ಹಡಗಲಿ ನಿಡಗುಂದಿಯ ರುದ್ರಮುನಿ ಶ್ರೀಗಳು ಚಿತ್ತರಗಿಯ ಶರಣಯ್ಯನವರು ಹಿರೇಮಠ, ನಿವೃತ್ತ ಶಿಕ್ಷಕ ಬಸಯ್ಯನವರು ಹಿರೇಮಠ ಹಾಗೂ ಗ್ರಾಮದ ಹಿರಿಯರು ಸಮಕ್ಷಮದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ನಂತರ ಭಕ್ತರು ರಥದ ಹಗ್ಗ ಎಳೆಯುವ ಮೂಲಕ ಭಕ್ತಿಭಾವದಲ್ಲಿ ಪರವಶರಾದರು. ಶ್ರೀ ಮಾರುತೇಶ್ವರ ಹಾಗೂ ಬಸವೇಶ್ವರ ದೇವಸ್ಥಾನಕ್ಕೆ ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆಯಿಂದಲೇ ಜನಸ್ತೋಮ ಕಕ್ಕಿರಿದು ತುಂಬಿ ದರ್ಶನ ಪಡೆದರು. ಬಣ್ಣ-ಬಣ್ಣದ ಬಗೆಬಗೆಯ ಹೂಗಳಿಂದ ಶೃಂಗಾರ ಮಾಡಿದ ಭವ್ಯವಾದ ರಥ ನೋಡುಗರ ಕಣ್ಮನ ಸೆಳೆಯಿತು.ರಥೋತ್ಸವದಲ್ಲಿ ಚಿತ್ತರಗಿ, ಕಿರಸೂರ, ಹಡಗಲಿ, ಬೆಳಗಲ್ಲ, ಹುನಗುಂದ, ಇಲಕಲ್ಲ, ಬೇವೂರ, ಹಳ್ಳೂರ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಜನ ಭಕ್ತರು ಪಾಲ್ಗೊಂಡಿದ್ದು ವಿಶೇಷವಾಗಿ ಕಂಡುಬಂತು.
ಅಧುನಿಕತೆಗೆ ಮಾರುಹೋಗಿ ಜಾನಪದ ಕಲೆ, ಕ್ರೀಡೆಗಳು ನಶಿಸುತ್ತಿರುವ ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಜಾತ್ರೆ, ಉತ್ಸವಗಳಲ್ಲಿ ಇಂದಿನ ಇಂತಹ ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಕೋಲಾಟ, ಜುಂಜುರಿ ಇಂತಹ ಹಲವಾರು ಕ್ರೀಡೆಗಳು ತನ್ನ ಜೀವಂತಿಕೆಗೆ ಸಾಕ್ಷಿ ಎಂಬಂತೆ ಜಾತ್ರಾ ಮಹೋತ್ಸವದ ಅಂಗವಾಗಿ ಅಲ್ಲಿಯ ಯುವಕರು ಪ್ರದರ್ಶನ ನೀಡಿದ ಜೂಂಜುರಿ ಹಾಗೂ ಕೋಲಾಟಗಳು ಸಾರ್ವಜನಿಕರನ್ನು ರಂಜಿಸಿತು. ಗ್ರಾಮದ ಬಸಪ್ಪ ಬಡಿಗೇರ ರವರ ಮಾರುತೇಶ್ವರ ಸೌಂಡ್ ಸಿಸ್ಟಮ್‍ನ ವಿವಿಧ ಚಲನಚಿತ್ರ ಜಾನಪದ ಹಾಡುಗಳಿಗೆ ತಕ್ಕಂತೆ ಪ್ರದರ್ಶನ ನೀಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು ಎಂದು ತಂಡದ ನಾಯಕ ಅನಿಲ ಜಗ್ಗಲ ತಿಳಿಸಿದರು.
ಈ ತಂಡಗಳಲ್ಲಿ ಊರಿನ ಯುವಕರಾದ ಬಸವರಾಜ ರಂಗನಗೌಡ್ರ, ರವಿ ಬೇರಗಿ, ಕುಮಾರ ಹೂವನೂರ, ಬಸವರಾಜ ಪೂಜಾರಿ, ಹನಮಂತ ಮೂಲಿಮನಿ, ಗಿರೀಶ ಹದ್ಲಿ, ಬಸವರಾಜ ಮೇಟಿ, ಶಿವು ಕೆಂಗಲ್ಲ, ಬಸವರಾಜ ದ್ಯಾವಪ್ಪ ಮಡಿವಾಳರ, ಸುಭಾಸ ಅಪ್ಪಣ್ಣವರ, ಬಸವರಾಜ ಮಡಿವಾಳರ, ದ್ಯಾಮಣ್ಣ ವಾಲಿಕಾರ, ಸಂಗಮೇಶ ವಾಲಿಕಾರ, ದಿನೇಶ ಸುನಗದ, ಇತರರು ಭಾಗವಹಿಸಿದ್ದರು. ಜಾತ್ರೆಯಲ್ಲಿ ಸುವ್ಯವಸ್ಥೆ ಕಲ್ಪಿಸಲು ಹುನಗುಂದ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ., ಶರಣಬಸಪ್ಪ ಅಜೂರ, ಹವಾಲ್ದಾರರುಗಳಾದ ಎಸ್.ವಾಯ್. ತಳವಾರ, ಕೆ.ವಾಯ್. ವಾಲಿಕಾರ ಸಿಬ್ಬಂದಿಗಳಾದ, ಶ್ರೀನಿವಾಸ ಹೊಸಮನಿ, ಮಹಾಂತೇಶ ಹೊಸಮನಿ, ನಾಗರಾಜ ಕುಂದರಗಿ, ಸಂಗಮೇಶ ತುಪ್ಪದ, ಶಿವನಗೌಡ ಗೌಡರ ಬಂದೋಬಸ್ತ್ ನೀಡಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin