ಹೈದರಾಬಾದ್ ಬೀದಿ ನಾಯಿಗೆ ಸಿಕ್ತು ‘ಭಾರತದ ಅತ್ಯಂತ ಮುದ್ದಿನ ಶ್ವಾನ’ ಕಿರೀಟ

ಈ ಸುದ್ದಿಯನ್ನು ಶೇರ್ ಮಾಡಿ

Dog-01

ಹೈದರಾಬಾದ್, ಸೆ.28 – ಹೈದರಾಬಾದ್‍ನ ಬೀದಿ ನಾಯಿ ರೊಸ್ಕೊ ಭಾರತದ ಅತ್ಯಂತ ಮುದ್ದಿನ ಶ್ವಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುತ್ತಿನನಗರಿಯಲ್ಲಿ ನಡೆದ ಪೆಟಾದ 5ನೇ ವಾರ್ಷಿಕ ಕ್ಯೂಟೇಸ್ಟ್ ಇಂಡಿಯನ್ ಡಾಗ್ ಅಲೈವ್ ಸ್ಪರ್ಧೆಯಲ್ಲಿ ಈ ಶ್ವಾನವನ್ನು ವಿಜಯಿಯನ್ನಾಗಿ ಘೋಷಿಸಲಾಯಿತು. ಪೀಪಲ್ ಫಾರ್ ಎಥಿಕಲ್ ಟ್ರೀಟ್‍ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಹೈದರಾಬಾದ್‍ನಲ್ಲಿ ಆಯೋಜಿಸಿದ್ದ ಭಾರತದ ಜೀವಂತ ಮುದ್ದಿನ ಶ್ವಾನ ಸ್ಫರ್ಧೆಯ ಫೈನಲ್‍ನಲ್ಲಿ ಸ್ಪರ್ಧೆಯಲ್ಲಿದ್ದ ಇತರ ಒಂಭತ್ತು ಶ್ವಾನಗಳನ್ನು ಹಿಂದಿಕ್ಕಿ ಸ್ಪಂದನಾ ರಾಜ್ ಅವರ ರೊಸ್ಕೊ ಗೆಲುವು ಸಾಧಿಸಿತು. ನೂರಾರು ಮತದಾರರು ಮತ್ತು ತೀರ್ಪುಗಾರರ ತೀರ್ಪನ್ನು ಪರಿಗಣಿಸಿ ಈ ಶ್ವಾನವನ್ನು ಕ್ಯೂಟೇಸ್ಟ್ ಇಂಡಿಯನ್ ಡಾಗ್ ಅಲೈವ್ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

ಬೀದಿ ನಾಯಿಗಳು ಮತ್ತು ದತ್ತು ಪಡೆದ ಶ್ವಾನಗಳಿಗಾಗಿಯೇ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಟೀಟ್ ಡಾಗ್‍ಗಳೂ ಕೂಡ ರಾಷ್ಟ್ರಮಟ್ಟದಲ್ಲಿ ಗೌರವಕ್ಕೆ ಪಾತ್ರವಾಗಬಹುದು ಎಂಬುದು ಇದು ಸಾಬೀತು ಮಾಡಿದೆ. ಕೊಲ್ಕತದ ಅನನ್ಯ ಕರ್ಮಾಕರ್ ಅವರು ದತ್ತು ಪಡೆದಿರುವ ನೆಕ್‍ಟಿ ಎರಡನೇ ಸ್ಥಾನ ಮತ್ತು ಗೋವಾದ ಮಿನಿಮಾ ಪೆರೆಸ್ ಸಾಕಿರುವ ಪೆಟು ತೃತೀಯ ಸ್ಥಾನ ಗಳಿಸಿತು.

► Follow us on –  Facebook / Twitter  / Google+

Facebook Comments

Sri Raghav

Admin