ಗಡಿಯಲ್ಲಿ ಪಾಕಿಗಳಿಂದ ಮತ್ತೆ ಕಿರಿಕ್ : ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Firing-01

ಶ್ರೀನಗರ, ಸೆ. 29-ಉರಿ ಸೇನಾ ನೆಲೆ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ನಂತರ ವಿಶ್ವ ಅನೇಕ ದೇಶಗಳಿಂದ ಛೀಮಾರಿಗೆ ಒಳಗಾಗಿರುವ ಪಾಕಿಸ್ತಾನ ಮತ್ತೆ ಗಡಿಯಲ್ಲಿ ಇಂದು ಕಾಲ್ಕೆರದುಕೊಂಡು ಅಪ್ರಚೋದಿತ ದಾಳಿ ನಡೆಸಿದೆ.  ಹಂದ್ವಾರಾ ವಲಯದ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಬಳಿ ಇಂದು ಮುಂಜಾನೆ ಪಾಕಿಸ್ತಾನಿ ಯೋಧರು ಕದನ ವಿರಾಮ ಉಲ್ಲಂಘಿಸಿ ಭಾರತೀಯ ಸೇನಾಪಡೆಗಳ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದರು.  ಭಾರತೀಯ ಸೇನೆ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಪಾಕಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿ ನಡೆದಿದೆ ಎಂದು ಗಡಿ ಭದ್ರತಾ ಪಡೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೌಗಮ್ ವಲಯದಲ್ಲೂ ಪಾಕ್ ಯೋಧರಿಂದ ಭಾರತೀಯ ಸೇನಾಪಡೆಗಳ ಮೇಲೆ ಗುಂಡಿನ ದಾಳಿ ನಡೆದಿದ್ದು, ಯುದ್ಧ ವಿರಾಮ ಉಲ್ಲಂಘನೆಯಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin