ಜಲವಿವಾದ ಬಿಗಡಾಯಿಸಲು ಕಾನೂನು, ನೀರಾವರಿ ತಜ್ಞರೇ ಕಾರಣ : ಪುಟ್ಟಣ್ಣಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

puttanna
ಮಂಡ್ಯ, ಸೆ.29-ಕಾವೇರಿ ನೀರಿನ ವಿಷಯದಲ್ಲಿ ಸುಪ್ರೀಂಕೋರ್ಟ್‌ನ ಮಾರಕ ತೀರ್ಪಿಗೆ ಕಾನೂನು ಮತ್ತು ನೀರಾವರಿ ತಜ್ಞರೇ ಕಾರಣರಾಗಿದ್ದು ಇದರಿಂದ ನಾವು ಬೆಲೆ ತೆರೆಬೇಕಾಗಿದೆ ಎಂದು ಪಾಂಡವಪುರ ಶಾಸಕ, ರೈತ ಸಂಘದ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ದೂರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸುಪ್ರೀಂ ಕೋರ್ಟ್ ಏನೇ ತೀರ್ಪು ನೀಡಿದರೂ ಜನಮತದ ಒಮ್ಮತದ ಅಭಿಪ್ರಾಯದ ಆಧಾರದ ಮೇಲೆ ಯಾವುದೇ ಕಾರಣಕ್ಕೂ ನೀರು ಹರಿಸಬಾರದು. ವಿಧಾನ ಮಂಡಲಗಳ ಒಮ್ಮತದ ಅಭಿಪ್ರಾಯವೂ ನೀರು ಬಿಡಬಾರದು ಎಂಬುದಾಗಿದೆ. ಆದರೆ ಪದೇ ಪದೇ ನ್ಯಾಯಾಲಯ ನೀರು ಬಿಡಿ ಎಂದು ಹೇಳುತ್ತಿದೆ. ಇಲ್ಲದ ನೀರನ್ನು ಎಲ್ಲಿಂದ ತಂದು ಬಿಡುವುದು ಎಂದು ಪ್ರಶ್ನಿಸಿದರು.

ನ್ಯಾಯಾಲಯಕ್ಕೆ ತನ್ನ ತೀರ್ಪಿನ ಅರಿವಾಗಿದೆ. ಹಾಗಾಗಿಯೇ ಕೇಂದ್ರ ಸರ್ಕಾರವನ್ನು ಮಧ್ಯಪ್ರವೇಶ ಮಾಡಿ ಸಂಧಾನ ಮಾಡುವಂತೆ ನಿರ್ದೇಶನ ನೀಡಿದೆ. ಈ ಕೆಲಸ ಮೊದಲೇ ಮಾಡಿದ್ದರೇ ರಾಜ್ಯಕ್ಕೆ ನ್ಯಾಯ ಸಿಗುತ್ತಿತ್ತು. ತನ್ನ ತಪ್ಪಿನ ಅರಿವಾದ ನಂತರ ಕೊಂಚ ಮೃದು ಧೋರಣೆ ಅನುಸರಿಸುತ್ತಿದೆ. ತೀರ್ಪು ನೀಡುವಾಗ ಕೃಷಿ ಜ್ಞಾನ ಮತ್ತು ಪ್ರಕೃತಿ ಜ್ಞಾನವನ್ನು ಪರಿಗಣಿಸಿ ನೀಡಬೇಕಿತ್ತು ಎಂದು ತೀರ್ಪಿನ ಧೋರಣೆಯನ್ನು ಖಂಡಿಸಿದರು. ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಶಂಬುನಹಳ್ಳಿ ಇದ್ದರು.

► Follow us on –  Facebook / Twitter  / Google+

Facebook Comments

Sri Raghav

Admin