ಜೀ ವಾಹಿನಿಯಲ್ಲಿ ವಿನೂತನ ಹಾರರ್ ಧಾರಾವಾಹಿ`ಅಂಜಲಿ’

ಈ ಸುದ್ದಿಯನ್ನು ಶೇರ್ ಮಾಡಿ

19ಈವರೆಗೆ ಒಗ್ಗರಣೆ ಡಬ್ಬಿ ಮೂಲಕ ಕನ್ನಡಿಗರ ಮನದಲ್ಲಿ ಚಿರವಾಗಿ ನಿಂತಿದ್ದ ಮುರಳಿ ಈಗ ಧಾರಾವಾಹಿಯ ನಿರ್ಮಾಣದತ್ತ ಮುಖ ಮಾಡಿದ್ದಾರೆ. ಅಂಜಲಿ ಎಂಬ ವಿನೂತನ ಹಾರರ್ ಕಥಾನಕವನ್ನು ಜೀ ವಾಹಿನಿಯ ವೀಕ್ಷಕರಿಗಾಗಿ ಅವರು ನಿರ್ಮಿಸುತ್ತಿದ್ದಾರೆ. ಬರುವ ಅ.3 ರಿಂದ ಸಂಜೆ 6.00 ಗಂಟೆಗೆ ಅಂಜಲಿ ಜೀ ವೀಕ್ಷಕರಿಗಾಗಿ ಎಲ್ಲರ ಮನೆಗಳಲ್ಲಿ ಹಾಜರಾಗಲಿದ್ದಾಳೆ.ಅಂಜಲಿ ಎಂದರೆ ವಯಸ್ಸಿಗೆ ಬಂದನಂತರ ಮರಣ ಹೊಂದಿದ ಅತೃಪ್ತ ಮಹಿಳೆಯ ಕಥೆಯಲ್ಲ. ಐದಾರು ವರ್ಷದ ಪುಟ್ಟ ಕಂದಮ್ಮ ಈ ಧಾರಾವಾಹಿಯ ಪ್ರಮುಖ ಪಾತ್ರಧಾರಿ. ಬೇಬಿ ಶ್ರಿತಾ ಅಂಜಲಿಯಾಗಿ ಈ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ.

ಪ್ರಸ್ತುತ ಜೀವನದ ವಾಸ್ತವತೆಯನ್ನು ತಿಳಿದು ಬದುಕನ್ನು ಅರಿತುಕೊಳ್ಳ ಬಯಸುವ ಜೀವವೊಂದರ ಕಥೆಯನ್ನು ಹೇಳ ಹೊರಟಿರುವ ಈ ಅಂಜಲಿ ಧಾರಾವಾಹಿಯನ್ನು ಎಂ.ಸಿ.ದಿಲೀಪ್‍ಕುಮಾರ್ ನಿರ್ದೇಶನ ಮಾಡಲಿದ್ದಾರೆ. ಹೊಸ ಥರದ ಕಥೆ, ನಿರೂಪಣೆಯನ್ನು ಹೊಂದಿರುವ ಈ ಧಾರಾವಾಹಿಯ ಪ್ರಮುಖ ತಾರಾಗಣದಲ್ಲಿ ಋತು, ಶಿವಧ್ವಜ್, ಮಧು ಹೆಗಡೆ ಸೇರಿದಂತೆ ಕನ್ನಡ ಚಿತ್ರರಂಗದ ಹಿರಿಯ ಹಾಗೂ ಕಿರಿಯ ಕಲಾವಿದರೆಲ್ಲರೂ ಅಭಿನಯಿಸಿರುವುದು ವಿಶೇಷ. ಈ ಧಾರಾವಾಹಿಯ ಚಿತ್ರೀಕರಣಕ್ಕಾಗಿ ಬೆಂಗಳೂರು ಹೊರವಲಯದಲ್ಲಿ ಅದ್ಧೂರಿಯಾಗಿ ಸೆಟ್‍ನಲ್ಲಿ ಸೆರೆ ಹಿಡಿಯಲಿದ್ದಾರಂತೆ.

 

► Follow us on –  Facebook / Twitter  / Google+

Facebook Comments

Sri Raghav

Admin