492 ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿದ ಹೈದರಾಬಾದ್ ಪಾಲಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Hydaraba

ಹೈದರಾಬಾದ್, ಸೆ.29- ಮಳೆ ಅವಾಂತರಕ್ಕೆ ನಲುಗಿದ ಹೆದರಾಬಾದ್‍ನಲ್ಲೂ ಅಕ್ರಮ ಕಟ್ಟಡ ತೆರವಿಗೆ ಇಲ್ಲಿನ ಮಹಾನಗರ ಪಾಲಿಕೆ ಮುಂದಾಗಿದೆ. ಬೃಹತ್ ಹೆದರಾಬಾದ್ ಮಹಾನಗರ ಪಾಲಿಕೆ (ಜಿಹೆಚ್‍ಎಂಸಿ) ಸುಮಾರು 492 ಕಟ್ಟಡಗಳನ್ನು ನೆಲಸಮಗೊಳಿಸಿದೆ. ಭಾರಿ ಮಳೆಯಿಂದಾಗಿ ನಗರದೆಲ್ಲೆಡೆ ನೀರು ತುಂಬಿ ಕೆರೆಯಂತಾಗಿತ್ತು. ಇದರಿಂದಾಗಿ ಜನವಸತಿ, ಸಂಚಾರ ಅಸ್ತವ್ಯಸ್ತವಾಗಿತ್ತು. ಮುಂದಿನ ದಿನಗಳಲ್ಲಿ ಮತ್ತೆ ಮಳೆಯಾಗುವ ಮುನ್ನವೇ ಪಾಲಿಕೆ ಎಚ್ಚೆತ್ತುಕೊಂಡಿದ್ದು, ಕೆರೆ ಸೇರಿದಂತೆ ಇನ್ನಿತರ ಒತ್ತುವರಿ ಜಾಗವನ್ನು ನೆಲಸಮಗೊಳಿಸಲಿದೆ. ಮನೆ, ಕಾಂಪ್ಲೆಕ್ಸ್ ಸೇರಿದಂತೆ ಈವರೆಗೆ ಒಟ್ಟು 492 ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಸುರಿದ ಮಳೆಯಿಂದಾಗಿ ರಸ್ತೆಗಳು ಮತ್ತು ಅಪಾರ್ಟ್‍ಮೆಂಟ್‍ಗಳು ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ನೀರು ತುಂಬಿ ಹೈದರಾಬಾದ್ ದ್ವೀಪ ಪ್ರದೇಶದಂತಾಗಿತ್ತು. ಅಕ್ರಮ ಕಟ್ಟಡಗಳ ನಿರ್ಮಾಣದಿಂದಾಗಿ ಈ ಅವಾಂತರ ಸೃಷ್ಟಿಯಾಗಿತ್ತು. ಈ ಹಿನ್ನೆಲೆ ಹೈದರಾಬಾದ್ ಮೇಯರ್ ಬಿ.ರಾಮ್‍ಮೋಹನ್ ಮತ್ತು ಜಿಎಚ್‍ಎಂಸಿ ಆಯುಕ್ತ ಬಿ.ಜನಾರ್ಧನ್ ಅಕ್ರಮ ಕಟ್ಟಡಗಳ ತೆರವಿಗೆ ಮುಂದಾಗಿದ್ದರು.  ಜನರ ಹಿತರಕ್ಷಣೆಗಾಗಿ ನಾವು ಅಕ್ರಮ ಕಟ್ಟಗಳನ್ನು ನೆಲಸಮಗೊಳಿಸುತ್ತಿದ್ದೇವೆ ಎಂದು ಮೇಯರ್ ಬಿ.ರಾಮ್‍ಮೋಹನ್ ತಿಳಿಸಿದ್ದಾರೆ.

ಮಳೆಯ ಅವಾಂತರಕ್ಕೆ ನಲುಗಿದ ಹೈದರಾಬಾದ್‍ನಲ್ಲಿ 28 ಸಾವಿರ ಅಕ್ರಮ ಕಟ್ಟಡಗಳ ತೆರವಿಗೆ ತೆಲಂಗಾಣ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಸಿಎಂ ಕೆ.ಚಂದ್ರಶೇಖರ್ ರಾವ್ ಕಳೆದ ವಾರ ಹೇಳಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin