ಕರ್ನಾಟಕ ಮಾನಸಿಕ ಪ್ರಾಧಿಕಾರದ ಅಧ್ಯಕ್ಷ ಡಾ.ಅಶೋಕ್ ಪೈ ಹೃದಯಾಘಾತದಿಂದ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

Ashok-Pai

ಸ್ಕಾಟ್ಲೆಂಡ್, ಸೆ.30: ಕರ್ನಾಟಕ ಮಾನಸಿಕ ಪ್ರಾಧಿಕಾರದ ಅಧ್ಯಕ್ಷ ಡಾ.ಅಶೋಕ್ ಪೈ ಗುರುವಾರ ಮಧ್ಯರಾತ್ರಿ 12ಕ್ಕೆ (ಭಾರತೀಯ ಕಾಲಮಾನ) ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿಚಾರ ಸಂಕಿರಣಕ್ಕಾಗಿ ಪತ್ನಿ ರಜನಿ ಪೈ ಅವರ ಜತೆಗೆ ತೆರಳಿದ್ದರು. ಹೃದಯಾಘಾತವಾದ ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಅವರು ಕಾಡಿನ ಬೆಂಕಿ, ಉಷಾಕಿರಣದಂಥ ಸಿನಿಮಾಗಳನ್ನು ನಿರ್ಮಿಸಿದ್ದರು. ಶಿವಮೊಗ್ಗದಲ್ಲಿ ಅಶೋಕ್ ಪೈ ಅವರ ಮಾನಸ ಆಸ್ಪತ್ರೆ ಇದೆ. ಪೈ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವ ಸಂದಿದೆ.

ಡಿಸೆಂಬರ್ 30, 1946ರಲ್ಲಿ ಜನಿಸಿದ ಅವರಿಗೆ ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ಸಂದಿತ್ತು. ಅವರು ಕೆಲ ಪುಸ್ತಕಗಳನ್ನು ಬರೆದಿದ್ದರು. ಮಾನಸಿಕ ಆರೋಗ್ಯ ಸಮಸ್ಯೆ ಇರುವ ಮಕ್ಕಳಿಗಾಗಿ ಆಶಾಕಿರಣ ಎಂಬ ವಸತಿ ಶಾಲೆ ನಡೆಸುತ್ತಿದ್ದರು. ಮಾನಸಿಕ ಆರೋಗ್ಯ ಸಮಸ್ಯೆ ಇರುವವರಿಗೆ ತೆರೆದಿರುವ ವಸತಿ ಚಿಕಿತ್ಸಾಲಯ ‘ಮಾನಸಧಾರಾ’ದ ಅಧ್ಯಕ್ಷರಾಗಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin