ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾವಳಿ-ತುಮಕೂರು ತಂಡಕ್ಕೆ ಮೊದಲ ಸ್ಥಾನ

ಈ ಸುದ್ದಿಯನ್ನು ಶೇರ್ ಮಾಡಿ

kabbadiತುಮಕೂರು, ಸೆ.30-ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಪಿಯು ಕಾಲೇಜುಗಳ ಗುಂಪು ಸ್ಪರ್ಧೆಗಳ ಕ್ರೀಡಾಕೂಟದಲ್ಲಿ ತಾಲೂಕು ಕಬ್ಬಡಿ ತಂಡ ಪ್ರಥಮ ಬಹುಮಾನ ಪಡೆದಿದೆ.ಕ್ರೀಡಾಕೂಟದಲ್ಲಿ 10 ತಂಡಗಳು ಭಾಗವಹಿಸಿದ್ದು,ಮಧುಗಿರಿ ತಾಲೂಕು ಮತ್ತು ತುಮಕೂರು ತಾಲೂಕು ನಡುವೆ ನಡೆದ ಫೈನಲ್ ಪಂದ್ಯದಲ್ಲಿ ತುಮಕೂರು ತಂಡ 13-7 ಅಂಕಗಳಿಂದ ಮಧುಗಿರಿ ತಂಡವನ್ನು ಸೋಲಿಸಿ ಜಿಲ್ಲಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಇದಕ್ಕೂ ಮೊದಲು ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ತುಮಕೂರು ತಂಡ ಚಿಕ್ಕನಾಯಕನಹಳ್ಳಿ ತಂಡವನ್ನು 21-14 ಅಂಕಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದರೆ, ಇನ್ನೊಂದು ಸೆಮಿಫೈನಲ್‍ನಲ್ಲಿ ಕುಣಿಗಲ್ ತಂಡವನ್ನು ಮಧುಗಿರಿ ತಂಡ 23-22 ಅಂಕಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತ್ತು.

ಕಬ್ಬಡಿ ತರಬೇತುದಾರ ಮಹಮದ್ ಇಸ್ಮಾಯಿಲ್ ಅವರ ಗರಡಿಯಲ್ಲಿ ತರಬೇತಿ ಪಡೆದ ತುಮಕೂರು ತಂಡ ತಾನಾಡಿದ ಎಲ್ಲಾ ಪಂದ್ಯಗಳಿಲ್ಲಿಯೂ ಅತಿ ಹೆಚ್ಚು ಅಂಕ ಪಡೆದು ಜಯಗಳಿಸಿದೆ. ತುಮಕೂರು ತಂಡದ ಪರವಾಗಿ ಮನೋಜ್, ಜೀತಲಾಲ್, ರಕ್ಷಿತ್, ಲಕ್ಕಿತ್, ಲಿಖಿತ, ಅಜೇಂiÀi ಉತ್ತಮ ಆಟ ಪ್ರದರ್ಶಿಸಿದರೆ, ಮಧುಗಿರಿ ಪರವಾಗಿ ಉಮೇಶ್ ಆರಾಧ್ಯ ಚನ್ನಾಗಿ ಆಟವಾಡಿದರು. ವಿಜೇತ ತುಮಕೂರು ತಾಲೂಕು ತಂಡವನ್ನು ಕೋಚ್ ಮಹಮದ್ ಇಸ್ಮಾಯಿಲ್,ಮಾನ್ಯೇಜರ್ ಜಗದೀಶಪ್ಪ ಮತ್ತು ಪ್ರದೀಪ್,ಸರ್ವೋದಯ ಪಿಯು ಕಾಲೇಜಿನ ಪ್ರಾಂಶುಪಾಲರಾದ ರುದ್ರಪ್ಪ ಅವರ ಅಭಿನಂದಿಸಿದ್ದಾರೆ.

 

► Follow us on –  Facebook / Twitter  / Google+

 

 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin