ನಾಳೆಯಿಂದ ನವರಾತ್ರಿ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

10

ಬಾಗಲಕೋಟೆ,ಸೆ.30- ನವರಾತ್ರಿ ಉತ್ಸವದ ಸಡಗರಕ್ಕೆ ನಾಳೆ ಚಾಲನೆ ಸಿಗಲಿದೆ. ವಿವಿಧ ಶ್ರೀ ವೆಂಕಟೇಶ್ವರ ದೇವಸ್ಥಾನ, ಅಂಬಾಭವಾನಿ, ಲಕ್ಷ್ಮಿ , ಯಲ್ಲಮ್ಮ ದೇವಿ ದೇವಾಲಯಗಳಲ್ಲಿ 9 ದಿನಗಳ ಕಾಲ ವಿವಿಧ ಉತ್ಸವಗಳು ನಡೆಯಲಿವೆ. ವೆಂಕಟಪೇಟೆ, ಹೊಸಪೇಟೆ, ನವನಗರದ ಶ್ರೀ ಸತ್ಯಬೋಧರಾಯರ ಮಠ, 57ನೇ ಸೆಕ್ಟರ್‍ನಲ್ಲಿರುವ ಕಿಲ್ಲಾ ಶ್ರೀ ವೆಂಕಟೇಶ್ವರ ದೇವಸ್ಥಾನ, ಕಿಲ್ಲಾ, ಹೊಸಪೇಟೆ, ನವನಗರದಲ್ಲಿರುವ ಅಂಬಾಭವಾನಿ ಮಂದಿರ, ಕಾಳಿಕಾ ದೇವಸ್ಥಾನ, ಲಕ್ಷ್ಮಿ  ದೇವಸ್ಥಾನದಲ್ಲಿ ರೂಪಾಲಂಕಾರ, ಧಾರ್ಮಿಕ ಕಾರ್ಯ ಕ್ರಮಗಳು ನಡೆಯಲಿವೆ.
ಮಾರವಾಡಿ ಗಲ್ಲಿ,  ರಸ್ತೆಯಲ್ಲಿ ಭವಾನಿ ಮೂರ್ತಿಯ ಪ್ರತಿಷ್ಠಾಪನೆ, ನಿತ್ಯ ಮಹಾ ಮಂಗಳಾರತಿ, ದಾಂಡಿಯಾ ರಾಸ್ ಆಕರ್ಷಣೆಯಾಗಲಿದೆ. ಮಾರವಾಡಿ ಗಲ್ಲಿಯಲ್ಲಿ ನವರಾತ್ರಿ ಉತ್ಸವದ ನಿಮಿತ್ಯ ಸಾಯಂಕಾಲದಿಂದ ಸ್ಪರ್ಧೆಗಳು ನಡೆಯಲಿದ್ದು 2 ರಂದು ಚುಕ್ಕಿ ರಂಗೋಲಿ, 3 ರಂದು ಫ್ರೀ ಹ್ಯಾಂಡ್ ರಂಗೋಲಿ, 4 ಹಾಗೂ 5ರಂದು ಭಕ್ತಿಗೀತೆ, ಮ್ಯೂಜಿಕಲï ಚೇರ್, ಮೇಹಂದಿ ಕಾರ್ಯಕ್ರಮ, 6ರಂದು ಬಾಲಕರಿಗಾಗಿ ಮ್ಯೂಜಿಕಲ  ಚೇರ್, 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಹೆರ್‍ಸ್ಟೈಲï, 7 ರಂದು ಸೌಜನ್ಯ ಮೋರೆ ನೃತ್ಯ ವೈಭವ, 5 ವರ್ಷ, 5ರಿಂದ 10, 10ರಿಂದ 1 ವರ್ಷದ ಮಕ್ಕಳಿಗಾಗಿ ವೇಷಭೂಷಣ ಸ್ಪರ್ಧೆ, 8ರಂದು 5ರಿಂದ 15ವರ್ಷ, 15ವರ್ಷ ಮೇಲ್ಪಟ್ಟವರಿಗಾಗಿ ಒಂದು ಮಿನಿಟ ಗೇಮ, 15 ವರ್ಷದವರಿಗಾಗಿ ಠಿಕಲಿ ಹಚ್ಚುವದು, ಮೇಕಪ್, 9ರಂದು ಆರತಿ ತಟ್ಟೆ ಸಿಂಗಾರ ಮಾಡುವದು, 10 ರಂದು ವಾಸವಿ ಭಜನಾ ಮಂಡಳದಿಂದ ಕೋಲಾಟ ಕಾರ್ಯಕ್ರಮ ನಡೆಯಲಿದ್ದು ಹೆಸರು ಕೊಚಲಿಚ್ಚಿಸುವವರು ಶ್ರೀಮತಿ ಶಾಂತಾಬಾಯಿ ಗೋಣಿ (9986429033) ಅವರಲ್ಲಿ ಹೆಸರು ನೋಂದಾಯಿಸಲು ಕೋರಲಾಗಿದೆ.
ಸೀತಿಮನಿ ರೇಲ್ವೆ ನಿಲ್ದಾಣ ಹತ್ತಿರ ಸ್ವಯಂಭೂ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ 9 ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಶ್ರೀ ಸೀತಾಚಲವಾಸ ವೆಂಕಟೇಶ ದೇವರ ಬಗ್ಗೆ ವಿಶೇಷ ಮಹಿಮೆ ಇದ್ದು ಶ್ರೀಕೃಷ್ಣ ಮಹಾತ್ಮ, ವಸಿಷ್ಟ ರಾಮಾಯಣದಲ್ಲಿಯೂ ಕೂಡ ಈ ಬಗ್ಗೆ ಪ್ರಸ್ತಾಪ ಇದೆ.ಈ ದೇವಸ್ಥಾನದಲ್ಲಿ ಘಟಸ್ಥಾಪನೆ, ರಾಯಚೂರಿನ ವೇ.ಮೂ. ಸರ್ವೋತ್ತಮಾಚಾರ್ಯ ಜೋಶಿ ಅವರಿಂದ ವೆಂಕಟೇಶ ಮಹಾತ್ಮೆ ಪುರಾಣ, ಪಂಡಿತರಾದ ಪ್ರದ್ಯುಮ್ನಾಚಾರ್ಯ ಪೂಜಾರ, ಶ್ರೀಕಾಂತಾಚಾರ್ಯ ಬಿದರ ಕುಂದಿ, ಮಧ್ವಾಚಾರ್ಯ ಮೊಖಾಶಿ, ರಘೋತ್ತಮಾಚಾರ್ಯ ನಾಗಸಂಪಗಿ, ವೆಂಕಟನರಸಿಂಹಾಚಾರ್ಯ, ಬಿಂದುಮಾಧವಾಚಾರ್ಯ ನಾಗಸಂಪಗಿ ಅವರಿಂದ ಪ್ರವಚನಗಳು ನಡೆಯಲಿವೆ.

 

ಖ್ಯಾತ ಕಲಾವಿದರಾದ ಶ್ಯಾಮ ಆಲೂರ, ಭಾರ್ಗವಿ ಗುಡಿ, ಗಾಯತ್ರಿ ಗುಡಿ, ರೇಣುಕಾ ನಾಕೋಡ, ರಘುನಾಥ ನಾಕೋಡ, ಜಯತೀರ್ಥ ಮೇವುಂಡಿ, ಸಂತೋಷ ಗದ್ದನಕೇರಿ, ಸುಮೇದಾ ಗದ್ದನಕೇರಿ, ಸೌಜನ್ಯಾ ಮೋರೆ, ಪ್ರವೀಣ ಮಂಕಣಿ, ನಾರಾಯಣ ತಾಸಗಾಂವ, ಶೇಷಗಿರಿದಾಸ ಮೈಸೂರು ರಾಮಚಂದ್ರಾಚಾರ್ಯ, ಶಂಕರ ಶಾನಭಾಗ, ಅನಂತ ಕುಲಕರ್ಣಿ ಅವರುಗಳು ಉತ್ಸವದಲ್ಲಿ ಪಾಲ್ಗೊಂಡು ನಿತ್ಯ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಅ. 5ರಂದು ಶ್ರೀ ವಿಷ್ಣು ಸಹಸ್ರನಾಮ ಹೋಮ ನಡೆಯಲಿದೆ. 11 ರಂದು ವಿಜಯದಶಮಿ ಕಾರ್ಯಕ್ರಮದೊಂದಿಗೆ ಉತ್ಸವ ಪೂರ್ಣಗೊಳ್ಳಲಿದೆ. ಉತ್ಸವ ಸಮಿತಿಯ ಅಧ್ಯ?ರಾದ ಪಾಂಡುರಂಗಾಚಾರ್ಯ ಇಟಗಿ, ಕಾರ್ಯದರ್ಶಿ ನರಸಿಂಹ ಆಲೂರ, ಗೋಪಾಲ ಆಲೂರ ಅವರ ನೇತೃತ್ವದಲ್ಲಿ ಸಿದ್ದತಾ ಕಾರ್ಯಕ್ರಮಗಳು ನಡೆದಿವೆ.
ಮರುಳಸಿದ್ಧ ಶಿವಯೋಗಿಗಳ ಪುಣ್ಯ ಸ್ಮರಣೋತ್ಸವ

ಅಥಣಿ,ಸೆ.30- ಸುಕ್ಷೇತ್ರ ಅಥಣಿ ಶೆಟ್ಟರಮಠದ ಕರ್ತೃ ಲಿಂಗೈಕ್ಯ ಪರಮ ಪೂಜ್ಯ ಶ್ರೀ ಮರುಳಸಿದ್ಧ ಶಿವಯೋಗಿಗಳ 124ನೇ ಪುಣ್ಯ ಸ್ಮರಣೋತ್ಸವದಲ್ಲಿ ಮಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ಶಂಕರ ಮಹಾಸ್ವಾಮಿಗಳ ಅಪ್ಪಣೆ ಮೇರೆಗೆ 5 ದಿನಗಳ ಕಾಲ ವಚನ ವೈಭವ ಪ್ರವಚನವನ್ನು ವಚನಕಾರಾದ ಶರಣ ಶ್ರೀ ಸಂಗನಗೌಡ ಪಾಟೀಲ ಅವರು ನಡೆಸಿಕೊಟ್ಟರು. ನಿನ್ನೆ ಬೆಳಗ್ಗೆ ಕರ್ತೃಗಳ ಗದ್ದಿಗೆಗೆ ರುದ್ರಾಭಿಷೇಕ, ಮಧ್ಯಾಹ್ನ ಮಹಾಪ್ರಸಾದ ಹಾಗೂ ಸಾಯಂಕಾಲ 7 ಗಂಟೆಗೆ ಮಹಾಮಂಗಲ ನಡೆಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮೋಟಗಿಮಠದ ಶ್ರೀ ಪ್ರಭು ಚನ್ನಬಸವ ಮಹಾಸ್ವಾಮಿಗಳು ವಹಿಸಿದ್ದರು. ನೇತೃತ್ವ ಅಭಿನವ ಗುರುಸಿದ್ಧ ಮಹಾಸ್ವಮಿಗಳು ವಿರಕ್ತಮಠ ಹಲ್ಯಾಳ, ಸಮ್ಮುಖ ಶ್ರೀಮಠದ ಮರುಳಸಿದ್ದ ಮಹಾಸ್ವಾಮಿಗಳು ಶೆಟ್ಟರಮಠ ಅಥಣಿ ಇವರು ವಹಿಸಿದ್ಧರು.

 

ಕಾರ್ಯಕ್ರಮದಲ್ಲಿ ಖ್ಯಾತ ಭಜನಾ ಕಲಾವಿದರಾ ಮಹಾದೇವಪ್ಪ ಹುಲ್ಯಾಳ, ಧುರಿಣರಾದ ಬಸವರಾಜ ಬುಟಾಳಿ, ಗಜಾನನ ಮಂಗಸುಳಿ, ಪುರಸಭೈ ಅಧ್ಯಕ್ಷ ಪ್ರಕಾಶ ಬಜಂತ್ರಿ, ಭಾಗವಹಿಸಿದ್ದರು. ವಚನ ವೈಭವ ಕಾರ್ಯಕ್ರಮದ ಐದು ದಿನಗಳ ಕಾಲ ಡಾ|| ಪಂಡಿತ ಪುಟ್ಟರಾಜ ಸಂಗೀತ ಪಾಠಶಾಲೆಯ ಶಿಕ್ಷಕರಾದ ಮಹೇಶ ಕಾಂಬಳೆ, ಚಿಕ್ಕಪ್ಪಾ ಸನದಿ, ಮುರುಳಿಧರ ಚೌಗಲಾ ನೀಡಿದರು. ಪ್ರತಿ ನಿತ್ಯ ಮುಕ್ತಾಯಕ್ಕನ ಬಳಗದವರು ಪ್ರಾರ್ಥನೆ ನಡಿಸಿದರು. ನಿರುಪಣೆ ಹಾಗೂ ವಂದನಾರ್ಪಣೆಯನ್ನು ಶರಣಶ್ರೀ ಆರ್.ಎಮ್. ಸಿಂದಗಿ ವಕೀಲರು ಮಾಡಿದರು.

 

► Follow us on –  Facebook / Twitter  / Google+

Facebook Comments

Sri Raghav

Admin