ನಾವು ಯುದ್ಧ ಬಯಸುವುದಿಲ್ಲ, ಭಾರತ ಯುದ್ಧ ಘೋಷಿಸಿದರೆ ಸುಮ್ಮನಿರುವುದಿಲ್ಲ : ನವಾಜ್ ಅವಾಜ್

ಈ ಸುದ್ದಿಯನ್ನು ಶೇರ್ ಮಾಡಿ

Nawax

ಇಸ್ಲಾಮಾಬಾದ್, ಸೆ.30-ಭಾರತದ ಜೊತೆ ನಾವು ಯುದ್ಧ ಮಾಡಲು ಬಯಸುವುದಿಲ್ಲ. ಒಂದು ವೇಳೆ ಭಾರತ ಯುದ್ಧ ಘೋಷಿಸಿದರೆ ತಕ್ಕ ಪ್ರತ್ಯುತ್ತರ ನೀಡಲು ಸಿದ್ಧರಾಗಿದ್ದೇವೆ ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ. ನೆರೆಯ ರಾಷ್ಟ್ರ ಭಾರತದ ಜೊತೆ ಉತ್ತಮ ಬಾಂಧವ್ಯ ಕಲ್ಪಿಸಿಕೊಳ್ಳಲು ಪಾಕ್ ಬಯಸುತ್ತಿದೆ. ಆದರೆ ಭಾರತ ಮಾತ್ರ ಯುದ್ಧ ಮಾಡಲು ಮುಂದಾಗಿದೆ ಎಂದು ಉಡಾಫೆ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಭಾರತ ಯುದ್ಧ ಸಾರಿದರೆ ನಮ್ಮ ರಕ್ಷಣೆಗಾಗಿ ಯುದ್ಧ ಮಾಡುತ್ತೇವೆ ಎಂದು ಅವರು ಇಸ್ಲಾಮಾಬಾದ್‍ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin