ಬಿಸಿಮುಟ್ಟಿಸಿದರೂ ತನ್ನ ಚಾಳಿ ಬಿಡುತ್ತಿಲ್ಲ ಪಾಕಿಗಳು : ಮತ್ತೆ ಕದನ ವಿರಾಮ ಉಲ್ಲಂಘನೆ

ಈ ಸುದ್ದಿಯನ್ನು ಶೇರ್ ಮಾಡಿ

Firing

ಜಮ್ಮು, ಸೆ.30-ಪಾಕ್ ಆಕ್ರಮಿತ ಪ್ರದೇಶದೊಳಗೆ ನುಗ್ಗಿ 40 ಉಗ್ರಗಾಮಿಗಳನ್ನು ಸಂಹಾರ ಮಾಡಿದ ಭಾರತೀಯ ಸೇನೆ ವಿರುದ್ಧ ಪಾಕಿಸ್ತಾನ ಹೇಡಿತನದ ಪ್ರತೀಕವಾಗಿ ಮತ್ತೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದೆ. ಕಣಿವೆ ರಾಜ್ಯ ಕಾಶ್ಮೀರದ ಅಕ್ನೂರ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನಿ ಯೋಧರು ಇಂದು ಬೆಳಿಗ್ಗೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. ಕಳೆದ 36 ಗಂಟೆಗಳಲ್ಲಿ ಪಾಕಿಸ್ತಾನಿ ಸೇನೆ ಉಲ್ಲಂಘಿಸಿರುವ ಐದನೇ ಯುದ್ಧ ವಿರಾಮ ಇದಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಪಾಕ್ ಯೋಧರು ಒಟ್ಟು ಆರು ಬಾರಿ ಕದನ ವಿರಾಮ ಉಲ್ಲಂಘಿಸಿದ್ದಾರೆ.

ನಿನ್ನೆ ರಾತ್ರಿ ಮತ್ತು ಇಂದು ಬೆಳಿಗ್ಗೆ ಜಮ್ಮು ಜಿಲ್ಲೆಯ ಪಲ್ಲನ್‍ವಾಲಾ, ಚಾಪ್ರಿಯಲ್ ಮತ್ತು ಸಮ್‍ನಾಮ್‍ನಲ್ಲಿನ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನವು ಮುಂಚೂಣಿ ನೆಲೆಗಳಿಂದ ಸಣ್ಣ ಪ್ರಮಾಣದ ಶಸ್ತ್ರಾಸ್ತ್ರಗಳ ಮೂಲಕ ಅಪ್ರಚೋದಿತ ದಾಳಿ ನಡೆಸಿದೆ ಎಂದು ಜಮ್ಮು ಡೆಪ್ಯೂಟಿ ಕಮಿಷನರ್ ಸಿಮ್ರನ್‍ದೀಪ್ ಸಿಂಗ್ ಹೇಳಿದ್ದಾರೆ.  ಪಾಕಿಸ್ತಾನವು ಕದನ ವಿರಾಮ ಉಲ್ಲಂಘಿಸಿ ನಡೆಸಿರುವ ಈ ದಾಳಿಯಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ.

► Follow us on –  Facebook / Twitter  / Google+

Facebook Comments

Sri Raghav

Admin