ಸಲ್ಲೇಖನ ವ್ರತ ಕೈಗೊಂಡ 83 ವರ್ಷ ವಯಸ್ಸಿನ ಕ್ಯಾನ್ಸರ್ ಪೀಡಿತ ಅಜ್ಜಿ

ಈ ಸುದ್ದಿಯನ್ನು ಶೇರ್ ಮಾಡಿ

Ajji9

ಕೋಲ್ಕತ್ತಾ, ಸೆ.30- ವೃದ್ಧರಾದ ಬಳಿಕ ಸಾಯುವರೆಗೂ ಯಾವುದೇ ಕಾಯಿಲೆ ಬರದೆ ನೆಮ್ಮದಿಯಿಂದ ಪ್ರಾಣ ಬಿಟ್ಟರೆ ಸಾಕಪ್ಪ ಅಂತ ಹಿರಿ ಜೀವ ಬಯುಸುತ್ತೆ. ಇನ್ನು ಆ ಸಮಯದಲ್ಲಿ ರೋಗಗಳು ಬಂದ್ರೆ ಪರಿಸ್ಥಿತಿ ಮಾತ್ರ ಭೀಕರ. ಇಲ್ಲೊಬ್ಬರು ಕ್ಯಾನ್ಸರ್ ಪೇಶೆಂಟ್ ಇದ್ದಾರೆ. ಹೆಸರು ಸೋಹಿನಿ ದೇವಿ ದುಗ್ಗರ್, 83 ವರ್ಷ ವಯಸ್ಸು. ಜೈನ್ ಸಮುದಾಯದವರಾದ ಇವರು, ಮೂಲತಃ ದಕ್ಷಿಣ ಕೋಲ್ಕತ್ತಾದ ನಿವಾಸಿ. ತಮಗೆ ಮುಕ್ತಿ ಸಿಗಬೇಕೆಂಬ ನಿಟ್ಟಿನಲ್ಲಿ ಸಂತಾರ ವ್ರತಾಚರಣೆಗೆ ಮುಂದಾಗಿದ್ದಾರೆ. ಸಂತಾರಗೆ ಸಲ್ಲೇಖನ ವ್ರತ ಎಂದೂ ಕರೆಯುತ್ತಾರೆ. ಜೈನ ಧರ್ಮದಲ್ಲಿ ಸಾವಿರಾರು ವರ್ಷಗಳಿಂದ ಪಾರಂಪರಿಕವಾಗಿ ಈ ವ್ರತ ಆಚರಣೆಯಲ್ಲಿದೆ. ಸಲ್ಲೇಖನ ಜೈನರ ಒಂದು ಪವಿತ್ರ ಆಚರಣೆ. ಆತ್ಮವನ್ನು ನಶ್ವರವಾದ ದೇಹದಿಂದ ಮುಕ್ತಗೊಳಿಸಲು ಆಚರಿಸುವ ಒಂದು ಉತ್ಕೃಷ್ಟ ಮಾರ್ಗ ಎಂದು ನಂಬಲಾಗಿದೆ.

ಜಗತ್ತಿನ ಬೇರೆ ಯಾವ ಧರ್ಮದಲ್ಲಿಯೂ ಈ ಪ್ರಕಾರದ ಪ್ರಕ್ರಿಯೆ ಕಾಣಸಿಗುವುದಿಲ್ಲ. ಈ ವ್ರತ ಕೈಗೊಳ್ಳುವ ವ್ಯಕ್ತಿ ತನ್ನ ಎಲ್ಲಾ ಕರ್ತವ್ಯ ಮುಗಿಸಿ ಎಂದರೆ ವೃದ್ಧಾಪ್ಯ ತಲುಪಿದ ನಂತರವೇ ಸ್ವಇಚ್ಛೆಯಿಂದ ಆತ್ಮೋನ್ನತಿಯಾಗುವವರೆಗೂ ಆಚರಿಸುತ್ತಾರೆ. ಇದು ಯಾರಿಗೂ ತೊಂದರೆ ನೀಡದೆ ಶಾಂತ ಮಾರ್ಗದಿಂದ ಆತ್ಮಾನುಭವ ಪಡೆಯುವ ಆಚರಣೆ. ಸಾಮಾನ್ಯ ಆತ್ಮಹತ್ಯೆ ಪ್ರಕರಣಗಳಲ್ಲಿ ವ್ಯಕ್ತಿ ಹತಾಶೆ, ಅವಮಾನ, ಸೋಲು, ಆರ್ಥಿಕ ಸಂಕಷ್ಟ, ವಾಸಿಯಾಗದ ರೋಗಗಳು ಇತ್ಯಾದಿ ಕಾರಣಗಳಿಂದ ಹಠಾತ್ತನೆ ಸಾಯುವ ನಿರ್ಧಾರಕ್ಕೆ ಬರುತ್ತಾನೆ. ಆದರೆ ಬೇರೆಯವರ ಭಾವನೆಗಳಿಗೆ ನೋವಾಗದ ರೀತಿಯಲ್ಲಿ, ತಮ್ಮೆಲ್ಲ ಸಮಾಜ ಬಾಂಧವರ ಮತ್ತು ಸಂಬಂಧಿಕರ ಒಪ್ಪಿಗೆ ಪಡೆದ ನಂತರವೇ ಸಲ್ಲೇಖನ ವ್ರತ ಆಚರಣೆ ಪ್ರಾರಂಭಿಸುತ್ತಾರೆ. ಇದೇರೀತಿ ಸೋಹಿನಿ ದೇವಿ ಸಹ ಗಂಟಲು ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ತಮ್ಮ ಕುಟುಂಬದ ಅನುಮತಿ ಪಡೆದೇ ಈ ವ್ರತಾಚರಣೆಗೆ ಮುಂದಾಗಿದ್ದಾರೆ.

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin