ಸಾಲ ಬಾಧೆಗೆ ಅನ್ನದಾತ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

farmers

ದಾವಣಗೆರೆ, ಸೆ.30- ಸಾಲದ ಬಾಧೆಗೆ ನೊಂದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಪನಹಳ್ಳಿ ತಾಲೂಕಿನ ಭೈರಾಪುರದಲ್ಲಿ ನಡೆದಿದೆ.ನಾರಪ್ಪ ಬೀರಪ್ಪ (45) ಆತ್ಮಹತ್ಯೆ ಮಾಡಿಕೊಂಡ ರೈತ.ಹಲವಾಗಲು ಗ್ರಾಮದ ನಿವಾಸಿಯಾದ ಭೀಮಪ್ಪ ಕಳೆದ ಕೆಲವು ವರ್ಷಗಳ ಹಿಂದೆ ತನ್ನ ಹೆಂಡತಿ ಮತ್ತು ಮಗನೊಂದಿಗೆ ಭೈರಾಪುರ ಗ್ರಾಮದಲ್ಲಿ ನೆಲೆಸಿದ್ದರು.ತನ್ನ ಮತ್ತು ಹೆಂಡತಿ ಹೆಸರಿನಲ್ಲಿದ್ದ ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಭೀಮಪ್ಪ ಕೃಷಿಗಾಗಿ ನೀಲಗುಂದ ಪ್ರಗತಿ ಕೃಷಿ ಬ್ಯಾಂಕ್‍ನಲ್ಲಿ 30 ಸಾವಿರ ಮತ್ತು ಇತರೆ ವ್ಯಕ್ತಿಗಳಿಂದ ಕೈಸಾಲ ಮಾಡಿಕೊಂಡಿದ್ದರು.ಸತತ ಮೂರು ವರ್ಷಗಳು ಬೆಳೆ ನಷ್ಟವಾದ ಹಿನ್ನೆಲೆಯಲ್ಲಿ ನೊಂದ ಭೀಮಪ್ಪ ವಿಷ ಸೇವಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin