ಅಂದಿನ ವಚನ ಸಾಹಿತ್ಯ ಇಂದು ಪ್ರಸ್ತುತವಾಗಿದೆ

ಈ ಸುದ್ದಿಯನ್ನು ಶೇರ್ ಮಾಡಿ

9

ಬೆಳಗಾವಿ,ಅ.1- ಹನ್ನೆರಡನೇ ಶತಮಾನದ ಬಸವಾದಿ ಶಿವಶರಣರು ವಚನಸಾಹಿತ್ಯ ಮೂಲಕ ಸಾಮಾಜಿಕ ಸುಧಾರಣೆಯ ಕನಸು ಕಂಡವರು, ಸಮಾಜದಲ್ಲಿ ಶೋಷಣೆ ಮುಕ್ತ ಬದುಕು ಆಗಿ ಮಾನವನ ಬದುಕಿನ ಸಾರ್ಥಕತೆ ಬಯಸಿದವರು. ಅಂದಿನ ವಚನ ಸಾಹಿತ್ಯ ಇಂದು ಪ್ರಸ್ತುತವಾಗಿದೆ ಎಂದು ಹುಕ್ಕೇರಿ ತಾಲೂಕಿನ ಬಸವ ಬೆಳವಿಯ ಶ್ರೀಗುರ ಚರಂತೇಶ್ವರಮಠದ ಪೂಜ್ಯ ಶರಣ ಬಸವದೇವರು ಹೇಳಿದರು. ಆಂಜನೇಯನಗರದ ಶ್ರೀ ಗಣಪತಿ ದೇವಾಲಯದ ಸಭಾಂಗಣದಲ್ಲಿ ಶರಣರಾದ ಅಶೋಕ ಗಂಗಾಧರ ಮಳಗಲಿಯವರ ಮನೆಯ ಮೇಲಂತಸ್ತಿನ ಗುರುಪ್ರವೇಶ ಸಮಾರಂಭದಲ್ಲಿ ವಿಜಯನಗರದ ಶ್ರೀ ಸದ್ಗುರು ಪ್ರಕಾಶನದಿಂದ ಪ್ರಕಟವಾದ ಶಿಕ್ಷಕ ಬಸವರಾಜ ಸುಣಗಾರರ ನಿಜ ಶರಣ ಅಂಬಿಗರ ಚೌಡಯ್ಯನವರು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿ ಅವರು ಮಾತನಾಡಿದರು.

ಬಸವಾದಿ ಶಿವಶರಣದರಿಂದಲೇ ನಿಷ್ಠುರ ಶರಣ, ವೀರ ಗಣಾಚಾರಿ, ನಿಜಶರಣರೆಂದು ಕರೆಯಿಸಿಕೊಂಡ ಅಂಬಿಗರ ಚೌಡಯ್ಯನವರು ಅಪರೂಪ ಶರಣರು. ಅವರ ಭಾಷೆ ನಿಷ್ಠೂರವಾದದ ಸಮಾಜ ಜಗೃತಿಯ ಚಿಂತನೆಗಳಿಂದ ಸದಾಕಾಲ ಪ್ರಸ್ತುತವಾಗಿವೆ. ಅಂಥ ವಿಚಾರಧಾರೆಗಳು ಜನಮನಕ್ಕೆ ತಲುಪಿಸುವ ಕಾರ್ಯವಾಗಬೇಕಾಗಿದೆ ಎಂದರು. ಶಿಕ್ಷಕ ಬಸವರಾಜ ಸುಣಗಾರರು ಈ ಕೃತಿ ಹೊರತರುವ ಮೂಲಕ ಉತ್ತಮ ಕಾರ್ಯ ಮಾಡಿದ್ದಾರೆ. ಪುಸ್ತಕವು ಚೆನ್ನಾಗಿ ಮೂಡಿಬಂದಿದೆ. ವಚನಗಳ ಸಮಗ್ರ ಚಿಂತನೆಯಿದ್ದು ಮನೆಯ ಗುರುಪ್ರವೇಶದಲ್ಲಿ ಪುಸ್ತಕ ಲೋಕಾರ್ಪಣೆ ಮಾಡಿಸುವ ಮೂಲಕ ಶರಣ ಅಶೋಕ ಮಳಗಲಿಯವರು ಇತರರಿಗೆ ಮಾದರಿಯಾಗಿರುವರು ಎಂದರು. ಪುಸ್ತಕ ಲೋಕಾರ್ಪಣೆ ಮಾಡಿದ ಹಿರಿಯ ಕವಿ ನಿವೃತ್ತ ನ್ಯಾಯಾಧೀಶ ಜಿನದತ್ತ ದೇಸಾಯಿಯವರು ಮಾತನಾಡಿ ಸಮಾಜ ಸುಧಾರಣೆಯ ಮಹೋನ್ನತ ಆಶಯ ಹೊಂದಿರುವ ಅಂಬಿಗರ ಚೌಡಯ್ಯನವರ ವಚನಗಳ ಭಾಷೆ ಉಗ್ರವೆನಿಸಿದರೂ ಅವುಗಳಲ್ಲಿ ಸಮಾಜ ಸುಧಾರಣೆಯ ಚಿಂತನೆಗಳಿವೆ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ನ್ಯಾಯವಾದಿ ಎಸ್.ಜಿ. ಮುಳವಾಡಮಠ ಲಿಂಗಾಯತ ಸಂಘಟನೆಯ ಅಧ್ಯಕ್ಷ ಶಂಕರ ಗುಡಸ ಮಾತನಾಡಿ ಕಾರ್ಯಕ್ರಮ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು. ಪ್ರೌಢಶಾಲಾ ಶಿಕ್ಷಕಿ ದಾನಮ್ಮ ಝಳಕಿಯವರು ನಿಜ ಶರಣ ಅಂಬಿಗರ ಚೌಡಯ್ಯನವರು ಕೃತಿಯನ್ನು ಪರಿಚಯಿಸಿ ವಿವಿಧ ಆಯಾಮಗಳಲ್ಲಿ ಶರಣ ಅಂಬಿಗರ ಚೌಡಯ್ಯನವರ ವಚನಗಳ ವಿಶ್ಲೇಷಣೆಗಳು ಓದುಗರ ಗಮನ ಸೆಳೆಯುತ್ತವೆ. ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಎಂದು ಹೇಳಿ ಲೇಖಕ ಬಸವರಾಜ ಸುಣಗಾರ ಅವರ ಕಾರ್ಯವನ್ನು ಶ್ಲಾಘಿಸಿದರು. ಅಶೋಕ ಮಳಗಲಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶ ವಿವರಿಸಿ, ಸ್ವಾಗತಿಸಿದರು. ಕೃತಿಕಾರ ಬಸವರಾಜ ಸುಣಗಾರ ತಮಗೆ ಪ್ರೊ ತ್ಸಾಹಿ ನೀಡಿದ ಸರ್ವರನ್ನೂ ಸ್ಮರಿಸಿ ಜನತೆಯ ಪ್ರೊ ತ್ಸಾಹ ದೊರೆಯಲೆಂದು ಆಶಿಸಿ ಕೃತಿಯನ್ನು ನಾಡಿನ ಜನತೆ ಸ್ವಾಗತಿಸುವರೆಂಬ ನಂಬಿಕೆ ವ್ಯಕ್ತಪಡಿಸಿದರು.

 

► Follow us on –  Facebook / Twitter  / Google+

 

Facebook Comments

Sri Raghav

Admin