ಗಡಿಯಲ್ಲಿ ನಿಂತಿಲ್ಲ ಪಾಕ್ ಕಿರಿಕ್ : ಮತ್ತೆ ಕದನ ವಿರಾಮ ಉಲ್ಲಂಘನೆ, ಅಪ್ರಚೋದಿತ ಗುಂಡಿನ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Firing-01

ಜಮ್ಮು, ಅ.1-ಪಾಕ್ ಆಕ್ರಮಿತ ಪ್ರದೇಶದೊಳಗೆ ನುಗ್ಗಿ 40 ಉಗ್ರಗಾಮಿಗಳನ್ನು ಸಂಹಾರ ಮಾಡಿದ ಭಾರತೀಯ ಸೇನೆ ವಿರುದ್ಧ ಪಾಕಿಸ್ತಾನ ಹೇಡಿತನದ ಪ್ರತೀಕವಾಗಿ ಮತ್ತೆ ಕದನ ವಿರಾಮ ಉಲ್ಲಂಘಿಸಿ ಗಡಿಯಲ್ಲಿ ಷೆಲ್ ಮತ್ತು ಗುಂಡಿನ ದಾಳಿ ನಡೆಸಿದೆ. ಕಳೆದ 56 ಗಂಟೆಗಳಲ್ಲಿ ಪಾಕಿಸ್ತಾನಿ ಸೇನೆ ಉಲ್ಲಂಘಿಸಿರುವ ಆರನೇ ಯುದ್ಧ ವಿರಾಮ ಇದಾಗಿದೆ. ಕಣಿವೆ ರಾಜ್ಯ ಕಾಶ್ಮೀರದ ಅಕ್ನೂರ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನಿ ಯೋಧರು ನಿನ್ನೆ ರಾತ್ರಿಯಿಂದ ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಅಪ್ರಚೋದಿತ ಗುಂಡಿನ ದಾಳಿ ಮುಂದುವರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಸೆಪ್ಟೆಂಬರ್ ತಿಂಗಳಿನಲ್ಲಿ ಪಾಕ್ ಯೋಧರು ಒಟ್ಟು 9 ಬಾರಿ ಕದನ ವಿರಾಮ ಉಲ್ಲಂಘಿಸಿದ್ದಾರೆ.

ಜಮ್ಮು ಜಿಲ್ಲೆಯ ಪಲ್ಲನ್‍ವಾಲಾ, ಚಾಪ್ರಿಯಲ್ ಮತ್ತು ಸಮ್‍ನಾಮ್‍ನಲ್ಲಿನ ಗಡಿ ನಿಯಂತ್ರಣ ರೇಖೆ ಯಲ್ಲಿ ಮೊನ್ನೆ ರಾತ್ರಿ ಮತ್ತು ನಿನ್ನೆ ಬೆಳಿಗ್ಗೆ ಪಾಕಿಸ್ತಾನವು ಮುಂಚೂಣಿ ನೆಲೆಗಳಿಂದ ಸಣ್ಣ ಪ್ರಮಾಣದ ಶಸ್ತ್ರಾಸ್ತ್ರಗಳ ಮೂಲಕ ಅಪ್ರಚೋದಿತ ದಾಳಿ ನಡೆಸಿದೆ ಎಂದು ಜಮ್ಮು ಡೆಪ್ಯೂಟಿ ಕಮಿಷನರ್ ಸಿಮ್ರನ್‍ದೀಪ್ ಸಿಂಗ್ ಹೇಳಿದ್ದಾರೆ.  ಪಾಕಿಸ್ತಾನವು ಕದನ ವಿರಾಮ ಉಲ್ಲಂಘಿಸಿ ನಡೆಸಿರುವ ಈ ದಾಳಿಯಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ.

► Follow us on –  Facebook / Twitter  / Google+

Facebook Comments

Sri Raghav

Admin