ಮತ್ತೆ ಭಾರತೀಯ ಸೇನೆ ದಾಳಿ ಭೀತಿ : 27 ಶಿಬಿರಗಳಿಂದ 300 ಉಗ್ರರು ಎಸ್ಕೇಪ್

ಈ ಸುದ್ದಿಯನ್ನು ಶೇರ್ ಮಾಡಿ

Camp

ಶ್ರೀನಗರ, ಅ.1-ಪಾಕಿಸ್ತಾನ ಆಕ್ರಮಿತ ಪ್ರದೇಶದಲ್ಲಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆ ಸುಳಿವನ್ನರಿತ 300ಕ್ಕೂ ಹೆಚ್ಚು ಉಗ್ರಗಾಮಿಗಳು ಪ್ರಾಣ ಭೀತಿಯಿಂದ ಪರಾರಿಯಾಗಿರುವ ಸಂಗತಿ ಬಯಲಾಗಿದೆ.  ಭಾರತೀಯ ಕಮ್ಯಾಂಡೋಗಳು ಉಗ್ರ ಸಂಹಾರ ನಡೆಸಲಿದ್ದಾರೆ ಎಂಬ ಕೊನೆ ಕ್ಷಣದ ಸುಳಿವು ದೊರೆಯುತ್ತಿದ್ದಂತೆ 27 ಶಿಬಿರಗಳಿಂದ 300ಕ್ಕೂ ಹೆಚ್ಚು ಕಾಲ್ಕಿತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ಪಿಓಕೆ ಪ್ರದೇಶಗಳಲ್ಲಿ ಭಾರತ ಸೇನೆಯ ಸೀಮಿತ ದಾಳಿಗೂ ಮುನ್ನ ಸುಮಾರು 500 ಶಿಬಿರಗಳಲ್ಲಿ ಉಗ್ರಗಾಮಿಗಳು ತರಬೇತಿ ಪಡೆಯುತ್ತಿದ್ದರು. ಈಗ ಒಟ್ಟು ಎಂಟು ಸ್ಥಳಗಳಲ್ಲಿ ಭಯೋತ್ಪಾದಕರ ನೆಲೆಗಳು ಸಂಪೂರ್ಣ ನಿರ್ನಾಮವಾಗಿದೆ.

ಮತ್ತೆ ಭಾರತೀಯ ಸೇನೆ ದಾಳಿ ಭೀತಿ : 27 ಶಿಬಿರಗಳಿಂದ 300 ಉಗ್ರರು ಎಸ್ಕೇಪ್

Facebook Comments

Sri Raghav

Admin