ಸಾಲ ಬಾಧೆ : ರೈತ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

farmers-suiced

ಬೇಲೂರು, ಸೆ.29- ರೈತರೊಬ್ಬರು ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಸಾಲವನ್ನು ತೀರಿಸಲಾಗದೆ, ಸಾಲ ಬಾಧೆಯಿಂದ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ತಾಲೂಕಿನ ಮುದಿಗೆರೆ ಗ್ರಾಮದಲ್ಲಿ ನಡೆದಿದೆ.ತಾಲೂಕಿನ ಕಸಬಾ ಹೋಬಳಿಯ ಮುದಿಗೆರೆ ಗ್ರಾಮದ ಧರ್ಮರಾಜು (45) ಎಂಬುವವರೆ ವಿಷ ಕುಡಿದು ಮೃತ ಪಟ್ಟಿರುವ ದುರ್ದೈವಿ.ಇವರು ತಮ್ಮ ಜಮೀನಿನ ಮೇಲೆ ಹೆಬ್ಬಾಳು ಕಾರ್ಪೊರೇಷನ್  ಬ್ಯಾಂಕ್‍ನಲ್ಲಿ 3 ಲಕ್ಷ ಹಾಗೂ ಗ್ರಾಮಸ್ಥರು, ಸಂಬಂಧಿಕರಿಂದ ಕೈಸಾಲವೆಂಬಂತೆ ಸಾವಿರಾರು ರೂ.ಗಳನ್ನು

 

ಪಡೆದಿದ್ದಾರೆಂದು ತಿಳಿದು ಬಂದಿದ್ದು, ಸರಿಯಾದ ಸಮಯಕ್ಕೆ ಸಾಲವನ್ನು ತೀರಿಸಲಾಗಲಿಲ್ಲ ಎಂಬ ಕೊರಗಿನಿಂದ ಹಾಗೂ ತಮ್ಮ ಮೂರು ಎಕರೆ ಜಮೀನಿನಲ್ಲಿ ಹಾಕಿದ್ದ ಜೋಳ, ಶುಂಠಿ ಹಾಗೂ ತರಕಾರಿ ಬೆಳೆಗೆ ಸರಿಯಾದ ಸಮಯಕ್ಕೆ ಮಳೆ ಬಾರದೆ ಬೆಳೆ ಹಾಳಾದ ಕಾರಣ, ಸಾಲ ತೀರಿಸಲಾಗದೆ ಮನ ನೊಂದು ಮುದಿಗೆರೆಯ ತಮ್ಮ ಮನೆಯಲ್ಲಿಯೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಷಯ ತಿಳಿದು ಬೇಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಶವವನ್ನು ಬೇಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin