ಸೆಲ್ಫಿ ಕೇಳಿದ ಅಭಿಮಾನಿಗೆ ಕಪಾಳ ಮೋಕ್ಷ ಮಾಡಿದ ಜಾನ್ ಅಬ್ರಹಾಂ

ಈ ಸುದ್ದಿಯನ್ನು ಶೇರ್ ಮಾಡಿ

Force-2

ಅಭಿಮಾನಿಗಳ ಅಭಿಮಾನ ಕೆಲವೊಮ್ಮೆ ತಾರಕಕ್ಕೇರಿದಾಗ ಖ್ಯಾತ ನಟರು ಬಿಸಿ ಮುಟ್ಟಿಸಿದ ಉದಾಹರಣೆಗಳೂ ಇವೆ. ಈ ನಿದರ್ಶನಕ್ಕೆ ಮಗದೊಂದು ಸೇರ್ಪಡೆ ಬಾಲಿವುಡ್ ಡಿಂಪಲ್ ಸ್ಟಾರ್ ಜಾನ್ ಅಬ್ರಹಾಂ. ತಾನು ನಟಿಸಿರುವ ಪೋರ್ಸ್  -2 ಸಿನಿಮಾದ ಟ್ರೈಲರ್ ಅನಾವರಣ ಸಂದರ್ಭದಲ್ಲಿ ಜಾನ್ ತನ್ನ ಅಭಿಮಾನಿ ಮೇಲೆ ಬಲ ಪ್ರಯೋಗ ಮಾಡಿ ಚಿತ್ರದ ಟೈಟಲ್‍ಅನ್ನು ಸಾರ್ಥಕಗೊಳಿಸಿದ್ದಾನೆ.

ಆಗಿದ್ದಿಷ್ಟು: ಮುಂಬೈನಲ್ಲಿ ಮೊನ್ನೆ ಪೋರ್ಸ್-2 ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮವಿತ್ತು. ಇದರಲ್ಲಿ ಜಾನ್ ಪಾಲ್ಗೊಂಡಿದ್ದ. ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಎಂದಿನಂತೆ ಕಿಕ್ಕಿರಿದಿದ್ದರು. ಗುಂಪಿನ ಮಧ್ಯೆ ಇದ್ದ ಬಾಲಿವುಡ್ ನಟನ ಜತೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಜಾನ್ ತಬ್ಬಿಬ್ಬಾದ ಸಂದರ್ಭದಲ್ಲಿ ಕಟ್ಟಾ ಅಭಿಮಾನಿಯೊಬ್ಬ ನಟನ ತೋಳು ಹಿಡಿದು ಫೋಟೋಗಾಗಿ ತನ್ನತ್ತ ಎಳೆದಾಡಿದ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಕುಪಿತನಾದ ಜಾನ್ ಅಭಿಮಾನಿ ಕೆನ್ನೆಗೆ ಬಾರಿಸಿಯೇ ಬಿಟ್ಟ. ತನ್ನ ರೋಷಾವೇಶದ ಫೋಟೋ ತೆಗೆಯಲು ಯತ್ನಿಸಿದ ವ್ಯಕ್ತಿಗೂ ಜಾನ್ ಧಮ್ಕಿ ಹಾಕಿದ. ಈ ಪ್ರಹಸನದ ನಂತರ ತಾನು ಕಪಾಳ ಮೋಕ್ಷ ಮಾಡಿಲ್ಲ ಎಂದು ನಾಯಕ ನಟ ಹೇಳಿಕೆ ನೀಡಿದ್ದಾನೆ. ಆ ಅಭಿಮಾನಿ ಜಾನ್ ಮನೆಗೆ ಹೋಗಿ ತನ್ನ ಅನುಚಿತ ವರ್ತನೆ ಬಗ್ಗೆ ನಟನಲ್ಲಿ ಕ್ಷಮೆ ಯಾಚಿಸಿ ದ್ದಾ ನಂತೆ.

 

► Follow us on –  Facebook / Twitter  / Google+

Facebook Comments

Sri Raghav

Admin