ವಿದ್ಯುತ್ ಅವಘಡದಿಂದ ಸ್ವಲ್ಪದರಲ್ಲೇ ಪಾರಾದ ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

Rahul-01

ಆಗ್ರಾ, ಅ.2- ಕಿಸಾನ್ ಮಹಾಯಾತ್ರೆ ವೇಳೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿದ್ಯುತ್ ಅವಘಡದಿಂದ ಸ್ವಲ್ಪದರಲ್ಲೇ ಪಾರಾಗಿರುವ ಘಟನೆ ನಿನ್ನೆ ನಡೆದಿದೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಮಹಾರಾಜ ಅಗ್ರಸೇನಾ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ತಂತಿ ಅವರ ತಲೆಗೆ ತಾಗಿದೆ. ತಕ್ಷಣ ಬಗ್ಗಿದ ರಾಹುಲ್ ಗಾಂಧಿ ಆ ಬಗ್ಗೆ ಸ್ಥಳೀಯ ಅರ್ಚಕರ ಗಮನ ಸೆಳೆದಿದ್ದಾರೆ. ಬಳಿಕ ರಕ್ಷಣಾ ಸಿಬ್ಬಂದಿ ಆ ತಂತಿಯನ್ನು ಮೇಲೆತ್ತಿ ರಾಹುಲ್ ಗಾಂಧಿ ವೇದಿಕೆಯಿಂದ ಕೆಳಗಿಳಿಯಲು ಸಹಕರಿಸಿದ್ದಾರೆ. ರಾಹುಲ್ ತಲೆಗೆ ತಗುಲಿದ ಈ ತಂತಿಯಲ್ಲಿ ಅದೃಷ್ಟವಶಾತ್ ವಿದ್ಯುತ್ ಪ್ರವಹಿಸುತ್ತಿರಲ್ಲಿಲ್ಲ. ಹೀಗಾಗಿ ಅವರು ಬಚಾವ್ ಆಗಿದ್ದಾರೆ. ಈ ವೇಳೆ ರಾಜ್ಯ ಘಟಕದ ಅಧ್ಯಕ್ಷ ರಾಜ್ ಬಬ್ಬರ್ ಮತ್ತಿತರರಿದ್ದರು.
ಕೆಲ ದಿನಗಳ ಹಿಂದಷ್ಟೇ ಇದೇ ರೀತಿಯ ರ್ಯಾಲಿಯೊಂದರ ವೇಳೆ ವ್ಯಕ್ತಿಯೊಬ್ಬ ರಾಹುಲ್ ಮೇಲೆ ಶೂ ಎಸೆದಿದ್ದ. ಈ ವೇಳೆಯಲ್ಲಿ ಎಸ್ಪಿಜಿ ಸಿಬಂದಿ ರಾಹುಲ್‍ಗೆ ತಲೆಗೆ ತಗಲದಂತೆ ನೋಡಿಕೊಂಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin