ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿ ಅಪಹರಣ

ಈ ಸುದ್ದಿಯನ್ನು ಶೇರ್ ಮಾಡಿ

Abduction
ಮುದ್ದೇಬಿಹಾಳ,ಅ.3- ಕಾಲೇಜಿಗೆಂದು ತೆರಳಿದ್ದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳನ್ನು ಅಪಹರಣ ಮಾಡಿರುವ ಘಟನೆ
ತಾಲೂಕಿನ ಕೋಳೂರ ತಾಂಡಾದಿಂದ ನಿನ್ನೆ ವರದಿಯಾಗಿದೆ.ಪಟ್ಟಣದ ಎಂಜಿವಿಸಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಅಧ್ಯಯನ ಮಾಡುತ್ತಿರುವ ಅಪ್ರಾಪ್ತ ವಯೋಮಿತಿಯ ಯುವತಿ ಸೆ. 29 ರಂದು ಕಾಲೇಜಿಗೆ ತೆರಳುವುದಾಗಿ ಹೇಳಿ ಸ್ನೇಹಿತೆಯೊಂದಿಗೆ ಮನೆಯಿಂದ ಹೊರ ಹೋದವಳು ಮರಳಿ ಮನೆಗೆ ಬಂದಿಲ್ಲ ಎಂದು ತಿಳಿಸಿದ್ದಾರೆ.
ತಮ್ಮ ಮಗಳು ಹೆಚ್ಚಾಗಿ ಸ್ನೇಹಿತೆ ಮಹಾದೇವಿ ಜಾಧವ ಮನೆಯಲ್ಲಿಯೇ ಇರುತ್ತಿದ್ದಳು. ಅಲ್ಲಿಗೆ ಕಳೆದ 8-10 ದಿನಗಳ ಹಿಂದೆ ಮಹಾದೇವಿಯ ಸಂಬಂಧಿಕ ತಾಂಡಾದ ಯುವಕ, ಹಾಲಿ ಬೆಂಗಳೂರಿನ ಶಿಕಾರಿಪಾಳ್ಯದಲ್ಲಿ ವಾಸಿಸುತ್ತಿರುವ ಕುಮಾರ ಬಸವರಾಜ ಜಾಧವ ಎಂಬಾತ ಬಂದಿದ್ದು ಆತನೇ ತಮ್ಮ ಮಗಳನ್ನು ಅಪಹರಿಸಿಕೊಂಡು ಹೋಗಿದ್ದಾನೆ. ಇದಕ್ಕೆ ತಾಂಡಾದ ಮಹಾದೇವಿ ಜಾಧವ, ಮಾನಸಿಂಗ ಜಾಧವ ಹಾಗೂ ಮಂಜುಳಾ ಜಾಧವ ಎಂಬುವರು ಸಹಕಾರ ನೀಡಿದ್ದಾರೆ ಎಂದು ದೂರಿ ಯುವತಿಯ ತಂದೆ ಅ. 1 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

► Follow us on –  Facebook / Twitter  / Google+

 

 

Facebook Comments

Sri Raghav

Admin