ಕೊಕೈನ್ ಮಾರಾಟ ಮಾಡುತ್ತಿದ್ದ ಇಬ್ಬರು ನೈಜೀರಿಯಾ ಪ್ರಜೆಗಳ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

13

ಬೆಂಗಳೂರು,ಅ.3- ಮಾದಕ ವಸ್ತು ಕೊಕೈನ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ದೇಶದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 6ಲಕ್ಷ ರೂ. ನಗದು, 300 ಗ್ರಾಂ ಕೊಕೈನ್ ಹಾಗೂ 7 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.ಬ್ರೈಟ್ ಇಗ್ಲೋ (36) ಮತ್ತು ಐಬ್‍ಚಿಂಡು ಮೈಕ್ (33) ಬಂಧಿತ ನೈಜೀರಿಯಾ ಪ್ರಜೆಗಳು.ಭೂಸಂದ್ರ ಬಸ್ ನಿಲ್ದಾಣ ಸಮೀಪದ ರಸ್ತೆಯಲ್ಲಿ ಸಾರ್ವಜನಿಕರಿಗೆ ಕೊಕೈನ್ ಎಂಬ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಸಿಸಿಬಿ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರಿಂದ 20ಲಕ್ಷ ರೂ. ಮೌಲ್ಯದ 300 ಗ್ರಾಂ ಕೊಕೈನ್, 7 ಮೊಬೈಲ್, ಎರಡು ವೇಯಿಂಗ್ ಮಿಷನ್ ಹಾಗೂ 6 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ.ಈ ಇಬ್ಬರು ಮಾದಕ ವಸ್ತು ಕೊಕೈನ್‍ನನ್ನು ತಮಗೆ ಪರಿಚಯ ವಿರುವ ಹಾಗೂ ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಬಾಂಬೆಯ ಯೂಚಿ ಎಂಬಾತನ ಮುಖಾಂತರ ಪಡೆದುಕೊಂಡು ಅದನ್ನು ಪ್ಯಾಕ್ ಮಾಡಿ ಸಾರ್ವಜನಿಕರಿಗೆ ಮಾರಾಟ ಮಾಡಿ ಲಕ್ಷಾಂತರ ರೂ. ಸಂಪಾದಿಸುತ್ತಿದ್ದದ್ದು ದಾಳಿ ವೇಳೆ ಕಂಡು ಬಂದಿದೆ.ಆರೋಪಿಗಳ ವಿರುದ್ಧ ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಬಿ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.

► Follow us on –  Facebook / Twitter  / Google+

 

Facebook Comments

Sri Raghav

Admin