ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ನವರಾತ್ರಿ ಉತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

melukote

ಮೇಲುಕೋಟೆ, ಅ.3- ಕಲ್ಯಾಣ ನಾಯಕಿ ಅಮ್ಮನವರಿಗೆ ಬಂಗಾರದ ಶೇಷವಾಹನೋತ್ಸವ ನೆರವೇರಿಸುವುದರೊಂದಿಗೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ನವರಾತ್ರಿ ಉತ್ಸವ ವಿದ್ಯುಕ್ತವಾಗಿ ಆರಂಭಗೊಂಡಿತು. ಒಂಬತ್ತು ದಿನಗಳ ಕಾಲ ನಡೆಯುವ ನವರಾತ್ರಿ ಉತ್ಸವದ ವೇಳೆ ಪ್ರತಿದಿನ ಬೆಳಿಗ್ಗೆ ಬೆಳ್ಳಿಯ ಪಲ್ಲಕ್ಕಿ ಉತ್ಸವ ನಂತರ ಬಂಗಾರದ ಶೇಷವಾಹನೋತ್ಸವ ನೆರವೇರಲಿದೆ. ಕಲ್ಯಾಣನಾಯಕಿ ಅಮ್ಮನವರಿಗೆ ಪ್ರತಿನಿತ್ಯ ವಿಶೇಷ ಅಲಂಕಾರ ನೆರವೇರಿಸಿ ಪೂಜೆ ನೆರವೇರಿಸಲಾಗುತ್ತದೆ. ನವರಾತ್ರಿಯ ಅಂಗವಾಗಿ ಪ್ರತಿ ರಾತ್ರಿ ಜಾಳಿಗೆ ಪೂಜೆ (ಲಕ್ಷ್ಮೀಪೂಜೆ ) ನಡೆಯುವುದು ವಿಶೇಷವಾಗಿದ್ದು, ಈ ಪೂಜೆಯಲ್ಲಿ ಪಾಲ್ಗೊಂಡು ದೇವಿಗೆ ಪ್ರಾರ್ಥನೆ ಸಲ್ಲಿಸಿದರೆ ಸಕಲ ಐಶ್ವರ್ಯವೂ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿ ಇದೆ.
ದೇಶಿಕರ ತಿರುನಕ್ಷತ್ರ: ಶ್ರೀವೈಷ್ಣವರ ಪ್ರಮುಖ ಆಚಾರ್ಯರಲ್ಲಿ ಒಬ್ಬರಾದ ವೇದಾಂತ ದೇಶಿಕರ ತಿರುನಕ್ಷತ್ರ ಮಹೋತ್ಸವ ಸಹ ಅ.11 ರಂದು ವಿಜಯದಶಮಿಯ ದಿನ ನಡೆಲಿದೆ. ಹತ್ತು ದಿನಗಳ ಕಾಲ ನಡೆಯಲಿರುವ ಈ ಧಾರ್ಮಿಕ ಮಹೋತ್ಸವವೂ ಸಹ ಶನಿವಾರದಿಂದ ಆರಂಭಗೊಂಡಿತು.
ವಿಜಯದಶಮಿ ವೈಭವ: ನವರಾತ್ರಿ ಮಹೋತ್ಸವದ ನಂತರ ನಡೆಯುವ ವಿಜಯದಶಮಿ ಚೆಲುವನಾರಾಯಣನ ಸನ್ನಿಧಿಯಲ್ಲಿ ವಿಶಿಷ್ಟವಾಗಿ ನಡೆಯುತ್ತಾ ಬಂದಿದ್ದು, ಅಂದು ಚೆಲುವನಾರಾಯಣನಿಗೆ ಮಹಾರಾಜರ ಅಲಂಕಾರ ನೆರವೇರಲಿದ್ದು, ಸಂಜೆ ಅಶ್ವವಾಹನದಲ್ಲಿ ವಿರಾಜಮಾನನಾಗುವ ಉತ್ಸವ ಮೂರ್ತಿ ಚೆಲುವರಾಯಸ್ವಾಮಿಗೆ ಬನ್ನೀಪೂಜೆ ನೆರವೇರಲಿದೆ. ಕಲ್ಯಾಣನಾಯಕಿ ಅಮ್ಮನವರಿಗೆ ಬೆಳ್ಳಿಯ ಶೇಷವಾಹನೋತ್ಸವ ಇದೇ ವೇಳೆ ನಡೆಯಲಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.

 

► Follow us on –  Facebook / Twitter  / Google+

Facebook Comments

Sri Raghav

Admin