ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ

ಈ ಸುದ್ದಿಯನ್ನು ಶೇರ್ ಮಾಡಿ

hiriyuru

ಹಿರೀಸಾವೆ, ಅ.3- ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇವಿಯವರ ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆತಿದ್ದು ಪ್ರಥಮ ದಿನದ ಕಾರ್ಯಕ್ರಮವಾಗಿ ಶ್ರೀ ಗದ್ದೆಕೆಂಪಮ್ಮ ದೇವಿಯವರ ಒಕ್ಕಲು ಜನರಿಂದ ಉಯ್ಯಾಲೆ ಕಂಬದ ಆವರಣದಲ್ಲಿ ಮಹಿಳೆಯರಿಂದ ರಂಗೋಲೆ ಬಿಡಿಸುವ ಕಾರ್ಯಕ್ರಮ ನಡೆಯಿತು.ನಂತರ ಉಯ್ಯಾಲೆ ಕಂಬದ ಮೇಲೆ ಸುತ್ತಲೂ ದೀಪೋತ್ಸವ  ಕಾರ್ಯಕ್ರಮ ನಡೆಯಿತು. ಮಹಿಳೆಯರು ಹಾಗು ಮಕ್ಕಳು ಸಾವಿರಾರು ದೀಪಗಳನ್ನು ಹಚ್ಚಿ ಸಂತಸಪಟ್ಟರು.ನಂತರ ಶ್ರೀ ಚೌಡೇಶ್ವರಿ ದೇವಿಯವರನ್ನು ದೇವಸ್ಥಾನದಿಂದ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಕರೆತಂದು ಉಯ್ಯಾಲೆ ಕಂಬದ ಮೇಲೆ ಕೂರಿಸಲಾಯಿತು. ಶ್ರೀ ದೇವಿಯವರಿಗೆ ಮತ್ತು ಶ್ರೀ ವಿದ್ಯಾ ಗಣಪತಿಯವರಿಗೆ ಮಹಾಮಂಗಳಾರತಿ ಮಾಡಿ ಪ್ರಸಾದ ನೀಡಲಾಯಿತು.

 

 

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin