ಜಪಾನಿಸ್ ಎನ್ಸಿಫಾಲಿಟಿಸ್ (ಜೆಇ) ಸೋಂಕಿಗೆ ಒಡಿಶಾದಲ್ಲಿ 23 ಮಂದಿ ಬಲಿ
ಭುವನೇಶ್ವರ್, ಅ.3- ಒಡಿಶಾದ ಮಲ್ಕನ್ಗಿರಿ ಜಿಲ್ಲೆಯಲ್ಲಿ ಮಾರಕ ಜಪಾನಿಸ್ ಎನ್ಸಿಫಾಲಿಟಿಸ್ (ಜೆಇ) ರೋಗಕ್ಕೆ ಬಲಿಯಾದವರ ಸಂಖ್ಯೆ 23ಕ್ಕೇರಿದೆ. ಸೋಂಕು ಹಬ್ಬದಂತೆ ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸರ್ಕಾರ ನಿರ್ದೇಶನ ನೀಡಿದೆ. ಮಲ್ಕನ್ಗಿರಿ ಜಿಲ್ಲೆಯಲ್ಲಿ ನಿನ್ನೆ ಈ ರೋಗದಿಂದ ಇನ್ನಿಬ್ಬರು ಮೃತಪಟ್ಟಿದ್ದು, ಸತ್ತವರ ಸಂಖ್ಯೆ 23ಕ್ಕೇರಿದೆ. ಆರು ಬ್ಲಾಕ್ಗಳ ವ್ಯಾಪ್ತಿಯಲ್ಲಿರುವ 21 ಗ್ರಾಮಗಳಲ್ಲಿ ರೋಗ ವ್ಯಾಪಿಸಿದೆ ಎಂದು ಆರೋಗ್ಯ ಇಲಾಖೆ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ. ಸೊಳ್ಳೆಗಳಿಂದ ಈ ಮಾರಕ ಸೋಂಕು ರೋಗ ವ್ಯಾಪಿಸುತ್ತಿದ್ದು, ಆರೋಗ್ಯ ಸಚಿವ ಆತನು ಸವ್ಯಸಾಚಿ ನಾಯಕ್ ಮತ್ತು ಇಲಾಖೆಯ ಕಾರ್ಯದರ್ಶಿ ಆರತಿ ಅಹುಜಾ ಇಂದು ರೋಗ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಾಮರ್ಶಿಸಿದರು.
ಕೆಲವು ಗ್ರಾಮಗಳಲ್ಲಿ ವೈದ್ಯರ ತಂಡ ವಾಸ್ತವ್ಯ ಹೂಡಿದ್ದು, ರೋಗ ತಡೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಸೊಳ್ಳೆಗಳ ಮೂಲಕ ಹಂದಿಗಳಿಂದ ಮನುಷ್ಯರಿಗೆ ಅದರಲ್ಲೂ ಮಕ್ಕಳಿಗೆ ಜೆಇ ರೋಗ ಹರಡುತ್ತಿದೆ. ಗ್ರಾಮಗಳಿಂದ ಹಂದಿಗಳನ್ನು ದೂರು ಇಡಲು ಕ್ರಮ ಕೈಗೊಳ್ಳಲಾಗುತ್ತಿದೆ.
► Follow us on – Facebook / Twitter / Google+