ದೀಪಾಲಂಕಾರದಿಂದ ಕಂಗೊಳಿಸುತ್ತಿದೆ ಮೈಸೂರು

ಈ ಸುದ್ದಿಯನ್ನು ಶೇರ್ ಮಾಡಿ

mysore

ಮೈಸೂರು, ಅ.3-ಮೈಸೂರು ದಸರಾ ಎಂದರೆ ಜಂಬೂ ಸವಾರಿಗೆ ಹೇಗೆ ಖ್ಯಾತಿ ಪಡೆದಿದೆಯೋ ಹಾಗೆಯೇ ನಗರದೆಲ್ಲೆಡೆ ದೀಪಾಲಂಕಾರ ಕೂಡ ನೋಡುಗರ ಕಣ್ಮನ ಸೆಳೆಯುತ್ತದೆ.ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಎಲ್‍ಇಡಿ ಬಲ್ಬ್‍ಗಳಿಂದ ಕಂಗೊಳಿಸುತ್ತಿದ್ದು, ಕಟ್ಟಡಗಳು, ದೇವರ ಚಿತ್ರಗಳು ನೋಡುಗರ ಮನ ಸೆಳೆಯುತ್ತಿವೆ.ಮೈಸೂರು ದಸರಾ ಹಿನ್ನೆಲೆಯಲ್ಲಿ ನಗರದ ರೈಲ್ವೆ ನಿಲ್ದಾಣ, ರಾಮಸ್ವಾಮಿ ವೃತ್ತ, ಕಾಡಾಕಚೇರಿ, ಜಯಚಾಮರಾಜೇಂದ್ರ ಒಡೆಯರ್ ವೃತ್ತ, ಕೆ.ಆರ್.ಸರ್ಕಲ್ ಸೇರಿದಂತೆ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ದೀಪಾಲಂಕಾರದಿಂದ ಝಗಮಗಿಸುತ್ತಿವೆ.

DSC_0103  DSC_0569     DSC_3729 DSC_9710
ಸಂಸತ್‍ಭವನ, ವಿಧಾನಸೌಧ ಆಕೃತಿಗಳನ್ನು ಎಲ್‍ಇಡಿ ಬಲ್ಬ್‍ಗಳಿಂದ ಮಾಡಿದ್ದು, ಕೇಂದ್ರ ರೈಲ್ವೆ ನಿಲ್ದಾಣ ಬಳಿ ಪಾರ್ಲಿಮೆಂಟ್ ಹಾಗೂ ವಿಧಾನಸೌಧದ ಮಾದರಿಗಳನ್ನು ವಿದ್ಯುತ್ ದೀಪಗಳಿಂದ ನಿರ್ಮಿಸಲಾಗಿದೆ.ರಾತ್ರಿಯಲ್ಲಿ ಇವುಗಳನ್ನು ನೋಡುವುದೇ ಒಂದು ಅದ್ಭುತ.
35 ಅಡಿ ಎತ್ತರ, 75 ಅಡಿ ಅಗಲ ವಿಸ್ತೀರ್ಣದ ವಿಧಾನಸೌಧ, 35 ಅಡಿ ಎತ್ತರ, 85 ಅಡಿ ಅಗಲದ ಪಾರ್ಲಿಮೆಂಟನ್ನು ವಿದ್ಯುತ್ ಬಲ್ಬ್‍ಗಳಿಂದ ಸಿಂಗರಿಸಲಾಗಿದೆ.ಮೈಸೂರು ರಾಜವಂಶಸ್ಥರ ಲಾಂಛನವಾದ ಗಂಡಬೇರುಂಡವನ್ನು ಬಣ್ಣಬಣ್ಣದ ವಿದ್ಯುತ್‍ದೀಪಗಳಿಂದ ಮೈಸೂರು ಮಹಾನಗರ ಪಾಲಿಕೆ ಬಳಿ ನಿಲ್ಲಿಸಲಾಗಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ.ವಿದ್ಯುತ್ ದೀಪಾಲಂಕಾರ ಕಳೆದ 4 ವರ್ಷದಿಂದಲೂ ನಡೆಸಿಕೊಂಡು ಬರಲಾಗುತ್ತಿದೆ.

DSC_0112

DSC_9789

DSC_9753

DSC_3721

DSC_3685

 

DSC_0573

DSC_0590

► Follow us on –  Facebook / Twitter  / Google+

Facebook Comments

Sri Raghav

Admin