ದೇವಿ ಮಹಾತ್ಮೆ ಪುರಾಣವೇ ದೇಹದ ಪುರಾಣ

ಈ ಸುದ್ದಿಯನ್ನು ಶೇರ್ ಮಾಡಿ

2

ಗದಗ ,ಅ.3- ಶಹರದ ವಿಭೂತಿ ಓಣಿಯ ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದ ಜ್ಞಾನ ಮಂಟಪದಲ್ಲಿ ಸತತವಾಗಿ 9ನೇ ವರ್ಷದಲ್ಲಿ ನಡೆಯುತ್ತಿರುವ ಶ್ರೀ ದೇವಿ ಪುರಾಣ ಪಾರಾಯಣವು ಈ ವರ್ಷವೂ ವಿಶೇಷವಾಗಿ ನಡೆಯುತ್ತಿದೆ ಶ್ರೀದೇವಿ ಪುರಾಣ ನಿರ್ಮಾಣದ ಪೂಜ್ಯಶ್ರೀ ಚಿದಾನಂದರ ಜೀವನ ವೃತ್ತಾಂತವನ್ನು ತಿಳಿಸುತ್ತಾ ಶ್ರೀದೇವಿ ಪುರಾಣದಲ್ಲಿ ಇದೇ ನಮ್ಮ ದೇಹದ ಪುರಾಣವಿದೆ. ಇದೇ ನಮ್ಮ ದೇಹದ ಇಂದ್ರಿಯಗಳೆ ನಮ್ಮ ಬದುಕಿನ ರಾಕ್ಷಸರು ಎಂದು ಪರಮಪೂಜ್ಯ ಫಕೀರೇಶ್ವರ ಮಹಾಸ್ವಾಮಿಗಳು ಪಾರಾಯಣ ಮಾಡುತ್ತ ಆಶೀರ್ವಚನ ನೀಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಗದಗ ಬೆಟಗೇರಿ ನಗರಸಭೈ ಅಧ್ಯಕ್ಷ ಪೀರಸಾಬ ಕೌತಾಳ, ಇಡೀ ಜಗತ್ತಿನ ಎಲ್ಲ ಕಾರ್ಯಗಳಿಗೂ ದೇವಿ ಆದಿಶಕ್ತಿಯೇ ಕಾರಣ ನೀರು ಒಂದೇ ಇರುತ್ತದೆ ಅಕ್ಕೆ ಬೇರೆ ಬೇರೆ ಹೆಸರಿನಿಂದ ಕರೆಯುತ್ತೇವೆ. ಹಾಗೆಯೇ ದೇವರಿಗೆ ಬೇರೆ ಬೇರೆ ಹೆಸರುಗಳಿವೆ ಆದರೆ ಶಕ್ತಿ ಮಾತ್ರ ಒಂದೇ ಆಗಿದೆ. ಹೀಗಾಗಿ ನಾವು ಯಾವುದೆ ಪರಂಪರೆಗೆ ಅಂಟಿಕೊಳ್ಳದೇ ಎಲ್ಲ ಪರಂಪರೆಯಲ್ಲಿ ಒಂದಾಗಿ ಬದುಕೋಣ ಎಂದು ಕರೆ ನೀಡಿದರು.ಇನ್ನೋರ್ವ ಅತಿಥಿಗಳಾದ ಬಾಬಣ್ಣ ಎಂ ಶಾಬಾದಿಮಠ ಶ್ರೀದೇವಿ ಪೂಜಾ ಪುಸ್ತಕಗಳ ಭಕ್ತಿಸೇವೆ ನಿರ್ವಹಿಸಿದ್ದರು. ರಾಮಣ್ಣ ಫಲದೊಡ್ಡಿ ಸನ್ಮಾನ ಸ್ವೀಕರಿಸಿ ಅನಿಸಿಕೆ ವ್ಯಕ್ತಪಡಿಸಿದರು.

ವಿನಾಯಕ ಮಾನ್ವಿ ಕಾರ್ಯಕ್ರಮ ಉದ್ಘಾಟಿಸಿ ಆದಿಶಕ್ತಿಯ ಚರಿತ್ರೆ ಪಾರಾಯಣವನ್ನು ನಿತ್ಯ ನಡೆಸಿ ಮಳೆ ಬೆಳೆ ಸಮೃದ್ಧವಾಗಲಿ ಎಂದು ಆಶಯನುಡಿಗಳನ್ನಾಡಿದರು. ಜಯದೇವ ಮೆಣಸಗಿ, ಬಾಬಣ್ಣ ಶಾಬಾದಿಮಠ, ವಿಶ್ವನಾಥ ರಾಮನಕೊಪ್ಪ ಪರಮೇಶಪ್ಪ ಜಂತ್ಲಿ ಆಶಯ ನುಡಿಗಳನ್ನಾಡಿದರು.ಶ್ರೀರೇಣುಕಾ ಯಲ್ಲಮ್ಮದೇವಿ ವಿವಿದೋದ್ಧೇಶ ಸಂಘದ ಉಪಾಧ್ಯಕ್ಷ ಫಕೀರಗೌಡ ಮರಿಗೌಡ್ರ, ಜಿ.ಬಿ. ಹಾವಣಗಿ, ಜಿ.ಪಿ. ಹಿರೇಮಠ, ಫಕಿರೇಶ ಕಮತರ, ಡಾ. ಶಿವಪುತ್ರಯ್ಯ ಕರಬಸಯ್ಯ ನಾಲತ್ವಾಡಮಠ, ರಾಮಕೃಷ್ಣ ಪಾಂಡ್ರೆ, ಎಂ.ಎಸ್. ಕಿಂದ್ರಿ, ಕಾರ್ತಿಕ ಕುಷ್ಟಗಿ, ವಿರುಪಾಕ್ಷಗೌಡ ದೇಸಾಯಿಗೌಡ್ರ, ಅನೀಲ ಅಬ್ಬಿಗೇರಿ, ಎಸ್.ಬಿ. ಗೊಣ್ಣಾಗರ, ಈರಣ್ಣ ಕರಭಿಷ್ಟಿ ಮಹೇಶ ಬೆಲ್ಲದ, ಜಿ.ಎಂ.ದಿಂಡೂರ, ಹನಮಂತಪ್ಪ ಮುಂಡರಗಿ, ಅಶೋಕ ಮಂದಾಲಿ, ಬಸವರಾಜ ಮಾಳಗಿ, ಇರ್ಷಾದ ಮಾನ್ವಿ ಮುಂತಾದವರು ಉಪಸ್ಥಿತರಿದ್ದರು.

 

 

► Follow us on –  Facebook / Twitter  / Google+

Facebook Comments

Sri Raghav

Admin