ಯೋಧರ ಧೈರ್ಯ ಸಾಹಸ ಮೆಚ್ಚುವಂತದ್ದು

ಈ ಸುದ್ದಿಯನ್ನು ಶೇರ್ ಮಾಡಿ

tippu

ಬೇಲೂರು, ಅ.3- ಪಾಕಿಸ್ತಾನದ ಉಗ್ರರನ್ನು ಅವರ ನೆಲದಲ್ಲೆ ನುಗ್ಗಿ ಸದೆ ಬಡಿದ ಭಾರತದ ವೀರ ಯೋಧರ ಧೈರ್ಯ ಸಾಹಸವನ್ನು ಬೆಂಬಲಿಸಿ ತಾಲೂಕು ವೀರ ಕನ್ನಡಿಗ ಟಪ್ಪು ಸೇನೆಯಿಂದ ಭಾರತೀಯರ ಸೈನಿಕರ ಪರವಾಗಿ ಘೋಷಣೆಗಳನ್ನು ಕೂಗಿ, ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಭಾರತೀಯ ಸೈನಿಕರ ಪರವಾಗಿ ಘೋಷಣೆಗಳನ್ನು ಕೂಗಿ ಸಿಹಿ ಹಂಚಿದ ನಂತರ ಮಾತನಾಡಿದ ವೀರ ಕನ್ನಡಿಗ ಟಪ್ಪು ಸೇನೆ ಅಧ್ಯಕ್ಷ ನೂರ್‍ಅಹಮದ್, ಮತ್ತೊಮ್ಮೆ ದೇಶದೊಳಕ್ಕೆ ನುಗ್ಗುವ ಪ್ರಯತ್ನದಲ್ಲಿರುವ ಉಗ್ರರಿಗೆ

ನಮ್ಮ ಭಾರತದ ಸೈನಿಕರು ಪಾಕಿಸ್ತಾನದ ನೆಲಕ್ಕೆ ನುಗ್ಗಿ ಉಗ್ರರನ್ನು ಹಿಮ್ಮೆಟ್ಟಿಸಿದ್ದಲ್ಲದೆ, ಸಾಕಷ್ಟು ಉಗ್ರಗಾಮಿಗಳನ್ನು ಹೊಡೆದುರುಳಿಸಿ ಮಾರಣ ಹೋಮ ನಡೆಸಿರುವ ನಮ್ಮ ಭಾರತೀಯ ಸೈನಿಕರ ದೈರ್ಯ ಸ್ಥೈಯ್ ಮೆಚ್ಚುವಂತದ್ದು ಎಂದರು.ಭಾರತೀಯರಾದ ನಾವುಗಳು ನಮ್ಮ ಸೈನಿಕರಿಗೆ ನೈತಿಕವಾಗಿ ಬೆಂಬಲಿಸುವ ಮೂಲಕ ಅವರ ಸೇವೆಯನ್ನು ಮೆಚ್ಚಿ ಸಾರ್ವಜನಿಕರಿಗೆ ಸಿಹಿಯನ್ನು ಹಂಚುತಿದ್ದೇವೆ ಎಂದು ತಿಳಿಸಿದರು.ವೀರ ಕನ್ನಡಿಗ ಟಪ್ಪು ಸೇನೆಯ ಅಹಮದ್ ಹುಸೇನ್ ಅಬ್ರಾರ್, ಅಹಮದ್ ಹುಸೇನ್ ಮತ್ತಿತರರಿದ್ದರು.

 

 

► Follow us on –  Facebook / Twitter  / Google+

Facebook Comments

Sri Raghav

Admin