`ರಾಜಹಂಸ’ ಚಿತ್ರದಲ್ಲಿ ಹೊಸಬರ ಜೊತೆ ಹಳಬರ ಸಂಗಮ

ಈ ಸುದ್ದಿಯನ್ನು ಶೇರ್ ಮಾಡಿ

18

ಜಡೇಶಕುಮಾರ್ ಅವರ ನಿರ್ದೇಶನದ ರಾಜಹಂಸ ಹೊಸಬರ ಜೊತೆ ಹಳಬರ ಸಂಗಮದ ಸಾಂಸಾರಿಕ ಚಿತ್ರವಾಗಿದೆ. ಪುಟ್ಟಗೌರಿ ಮದುವೆ ಧಾರಾವಾಹಿಯ ಮೂಲಕ ಕಿರುತೆರೆ ವೀಕ್ಷಕರ ನೆಚ್ಚಿನ ನಾಯಕಿಯಾಗಿರುವ ರಂಜನಿ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅಲ್ಲದೆ ಹಿರಿಯ ಕಲಾವಿದರಾದ ಶ್ರೀಧರ್ ಹಾಗೂ ಯಮುನಾ ಕೂಡ ಈ ಚಿತ್ರದಲ್ಲಿ ಹೀರೋ ತಂದೆ-ತಾಯಿಯಾಗಿ ಅಭಿನಯಿಸಿದ್ದಾರೆ. ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್‍ರ ಜೊತೆ `ಚಿನ್ನ’ ಚಿತ್ರದಲ್ಲಿ ನಾಯಕಿಯಾಗಿದ್ದ ಈ ನಟಿ ದುನಿಯಾ ವಿಜಯ್ ಅಭಿನಯದ ಕಂಠೀರವ ಚಿತ್ರದಲ್ಲೂ ಅಭಿನಯಿಸಿದ್ದರು. ಬಹಳ ದಿನಗಳ ನಂತರ ಕನ್ನಡ ಚಿತ್ರರಂಗದಲ್ಲಿ ಯಮುನಾ ಅವರು ಕಾಣಿಸಿಕೊಂಡಿದ್ದಾರೆ. ಗೌರಿಶಿಖರ್ ಈ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದು, ಇದು ಅವರ 2ನೆ ಚಿತ್ರವಾಗಿದೆ. ಈ ಹಿಂದೆ ಅವರು ಜೋಕಾಲಿ ಎಂಬ ಚಿತ್ರದಲ್ಲಿ ನಟಿಸಿದ್ದರು.

ಎಂಟು ಜನ ಸ್ನೇಹಿತರು ಸೇರಿ ಜನಮನ ಸಿನಿಮಾಸ್ ಎಂಬ ಬ್ಯಾನರ್‍ನಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮೊನ್ನೆ ಈ ಚಿತ್ರದ ಫಸ್ಟ್ ಲುಕ್ ಟೀಸರ್ ಅನಾವರಣ ಸಮಾರಂಭ ನಡೆಯಿತು. ಆಗ ಚಿತ್ರತಂಡ ಹಾಜರಿದ್ದು ಈವರೆಗಿನ ಅನುಭವಗಳನ್ನು ಹೇಳಿಕೊಂಡಿತು.ನಿರ್ದೇಶಕ ಜಡೇಶಕುಮಾರ್ ಮಾತನಾಡುತ್ತಾ, ರಾಜಹಂಸ ಎನ್ನುವುದು ಚಿತ್ರದ ನಾಯಕ ಹಾಗೂ ನಾಯಕಿಯ ಹೆಸರು ಹಂಸಕ್ಷೀರ ನ್ಯಾಯದ ಥರ ಸದಾ ಒಳ್ಳೆ ಯದನ್ನೇ ಯಾವಾಗಲೂ ಬಯಸ ಬೇಕು, ಒಳ್ಳೆಯದನ್ನೇ ಬೆಳೆಸಬೇಕು ಎಂಬ ಎಳೆ ಯನ್ನಿಟ್ಟುಕೊಂಡು ಈ ಚಿತ್ರದ ಕಥೆಯನ್ನು ರೆಡಿ ಮಾಡಿದ್ದೇನೆ.

ನಾಯಕ ಗೌರಿಶಿಖರ ನನ್ನ 7 ವರ್ಷಗಳ ಗೆಳೆಯ. ಈಗಾಗಲೇ 58 ದಿನಗಳ ಚಿತ್ರೀಕರಣವನ್ನು ತೀರ್ಥಹಳ್ಳಿ ಹಾಗೂ ಬೆಂಗಳೂರು ಸುತ್ತ ನಡೆಸಲಾಗಿದ್ದು ಒಂದು ಹಾಡಿನ ಚಿತ್ರಣ ಮಾತ್ರ ಬಾಕಿಯಿದೆ. ಆ ಹಾಡನ್ನು ವಿದೇಶದಲ್ಲಿ ಅಥವಾ ಹೈದರಾಬಾದ್‍ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟ್ ಮಾಡುವ ಪ್ಲ್ಯಾನ್ ಇದೆ ಎಂದು ಹೇಳಿದರು.ಫ್ಯಾಮಿಲಿ ಡ್ರಾಮಾ ಜೊತೆಗೆ ಉತ್ತಮವಾದ ಆ್ಯಕ್ಷನ್ ಹಾಗೂ ಲವ್ ಸ್ಟೋರಿ ಕೂಡ ಈ ಚಿತ್ರದಲ್ಲಿದೆ. ಸದ್ಯ ಚಿತ್ರದ ಪೋಸ್ಟ್  ಪ್ರೊಡೆಕ್ಷನ್  ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.ರಂಜನಿ ಮಾತನಾಡಿ, ಈ ಹಿಂದೆ ನನಗೆ ಒಂದಷ್ಟು ಅವಕಾಶಗಳು ಒಂದಿದ್ದವು. ನಾನು ಒಪ್ಪಿರಲಿಲ್ಲ. ಇಂಥ ಒಳ್ಳೆ ಪಾತ್ರ ಅದರಲ್ಲೂ ನಾಯಕಿ ಪ್ರಧಾನ ಪಾತ್ರವಾದ್ದರಿಂದ ಒಪ್ಪಿದೆ ಎಂದು ಹೇಳಿದರು. ಬಿ.ಸಿ.ಪಾಟೀಲ್ ನಾಯಕಿಯ ತಂದೆಯಾಗಿ ಕಾಣಿಸಿಕೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin