ಹೆರಿಗೆಗೆ ಸಹಕರಿಸಲಿಲ್ಲವೆಂದು ಗರ್ಭಿಣಿಯನ್ನು ಆಸ್ಪತ್ರೆಯಿಂದ ಹೊರಹಾಕಿದ ವೈದ್ಯರು, ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಈ ಸುದ್ದಿಯನ್ನು ಶೇರ್ ಮಾಡಿ

Baby

ಯಾದಗಿರಿ, ಅ.3-ಹೆರಿಗೆ ಸಂದರ್ಭದಲ್ಲಿ ಸರಿಯಾಗಿ ಸಹಕರಿಸಲಿಲ್ಲವೆಂದು ಖಾಸಗಿ ಆಸ್ಪತ್ರೆ ವೈದ್ಯರು ತುಂಬು ಗರ್ಭಿಣಿಯನ್ನು ಆಸ್ಪತ್ರೆಯಿಂದ ಹೊರಹಾಕಿದ ಪರಿಣಾಮ ಮಧ್ಯರಾತ್ರಿ ನಡುರಸ್ತೆಯಲ್ಲಿ ಹೆರಿಗೆಯಾದ ಘಟನೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದಿದೆ.ರಾತ್ರಿ 12 ಗಂಟೆ ಸುಮಾರಿಗೆ ರಸ್ತೆ ಮೇಲೆಯೇ ರೇಣುಕಾಂಬ ಎಂಬುವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.ಯಾದಗಿರಿ ಜಿಲ್ಲೆ, ಶಹಾಪುರ ತಾಲೂಕಿನ ಖಾನಾಪುರ ನಿವಾಸಿ ರೇಣುಕಮ್ಮ ಹೆರಿಗೆಗೆಂದು ಇಲ್ಲಿನ ಆದರ್ಶ ಆಸ್ಪತ್ರೆಗೆ ಹೋಗಿದ್ದಾರೆ.ವೈದ್ಯರಾದ ಡಾ.ಪ್ರೇಮ ಅವರು ಯಾವುದೋ ಕಾರಣ ನೀಡಿ ಇವರನ್ನು ಹೊರ ಹಾಕಿದ್ದಾರೆ. ಹೊರ ಬಂದ ಕೂಡಲೇ ನಡುರಸ್ತೆಯಲ್ಲಿಯೇ ಹೆರಿಗೆ ಆಗಿದೆ.ರಸ್ತೆಯಲ್ಲಿ ಹೆರಿಗೆಯಾಗಿದ್ದರೂ ಆಸ್ಪತ್ರೆ ಸಿಬ್ಬಂದಿ ಸಹಾಯಕ್ಕೆ ಬರಲಿಲ್ಲ ಎಂದು ಗಂಭೀರ ಆರೋಪ ಮಾಡಲಾಗಿದೆ.

 

 

► Follow us on –  Facebook / Twitter  / Google+

Facebook Comments

Sri Raghav

Admin