ಐಎಎಫ್ 84ನೆ ವಾರ್ಷಿಕೋತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

6

ಬೆಂಗಳೂರು, ಅ.4- ಗಗನ ರಕ್ಷಕ ಭಾರತೀಯ ವಾಯುಪಡೆ ಇದೇ 8 ರಂದು 84ನೆ ವಾರ್ಷಿಕೋತ್ಸವಕ್ಕೆ ಸಜ್ಜಾಗಿದೆ.1932ರಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾದ ಭಾರತೀಯ ವಾಯುಪಡೆ ಇಂದು ಜಗತ್ತಿನಲ್ಲೇ 4ನೆ ಅತಿ ದೊಡ್ಡ ವಾಯುಪಡೆಯಾಗಿ ಬೆಳೆದು ನಿಂತಿದೆ.ಯುದ್ಧಗಳು ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸುವ ಮೂಲಕ ದೇಶವೇ ಹೆಮ್ಮೆ ಪಡುವಂತೆ ಮಾಡಿದೆ. ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲೂ ಭಾರತೀಯ ವಾಯುಪಡೆಯ ಕೊಡುಗೆ ಗಮನಾರ್ಹವಾದದ್ದು. ಈ ಸಾಧನೆಯ ಹಿನ್ನೆಲೆಯಲ್ಲಿ ವಿಮಾನ ಮತ್ತು ವ್ಯವಸ್ಥೆಗಳ ಪರೀಕ್ಷಾ ಸಂಸ್ಥೆಯಲ್ಲಿ ತರಬೇತಿ ಪಡೆದ ಸಿಬ್ಬಂದಿ ಕೊಡುಗೆ ಮಹತ್ವದ್ದಾಗಿದೆ. ಇಂದು ಎಚ್‍ಎಎಲ್ ವಿಮಾನ ನಿಲ್ದಾಣದ ಬಳಿ ವಾಯುಪಡೆಯ ಸಾಹಸಗಳ ಬಗ್ಗೆ ಪ್ರದರ್ಶನ ನೀಡಲಾಯಿತು.

 

► Follow us on –  Facebook / Twitter  / Google+

Facebook Comments

Sri Raghav

Admin