ಕೊನೆ ಕ್ಷಣದಲ್ಲಿ ವಾದಮಂಡಿಸಲು ಒಪ್ಪಿದ ನಾರಿಮನ್

ಈ ಸುದ್ದಿಯನ್ನು ಶೇರ್ ಮಾಡಿ

Nariman-01

ಬೆಂಗಳೂರು, ಅ.4- ರಾಜ್ಯ ಬಿಜೆಪಿ ನಾಯಕರು ಕ್ಷಮೆಯಾಚಿಸುವವರೆಗೂ ಕಾವೇರಿ ನದಿ ನೀರು ಹಂಚಿಕೆ ವಿವಾದ ಪ್ರಕರಣದಲ್ಲಿ ರಾಜ್ಯದ ಪರ ವಾದ ಮಂಡಿಸುವುದಿಲ್ಲ ಎಂದು ಹಿರಿಯ ವಕೀಲ ಫಾಲಿ ಎಸ್.ನಾರಿಮನ್ ಪಟ್ಟು ಹಿಡಿದಿದ್ದರು. ಮುನಿಸಿಕೊಂಡಿರುವ ನಾರಿಮನ್ ಅವರ ಮನವೊಲಿಕೆಗಾಗಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಕಳೆದ ರಾತ್ರಿಯೇ ದೆಹಲಿಗೆ ತೆರಳಿದ್ದರು. ಇಂದು ನಾರಿಮನ್ ಅವರನ್ನು ಭೈೀಟಿಯಾಗಿ ವಾದ ಮಂಡನೆ ಮಾಡುವಂತೆ ಮನವೊಲಿಸಿದರು. ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹಾಗೂ ಕೆ.ಎಸ್.ಈಶ್ವರಪ್ಪ ಕ್ಷುಲ್ಲಕ ಕಾರಣಕ್ಕಾಗಿ ನನ್ನ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಅವರು ಕ್ಷಮೆಯಾಚಿಸದ ಹೊರತು ನಾನು ವಾದ ಮಂಡನೆ ಮಾಡುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದ್ದರು.

ನಿಮ್ಮ ಕೆಟ್ಟ ರಾಜಕಾರಣವನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ. ಅದರಿಂದ ನಾನೇಕೆ ಮುಜುಗರ ಅನುಭವಿಸಬೇಕು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ನಾರಿಮನ್, ನನಗೆ ಹಣದ ಅಗತ್ಯತೆ ಇಲ್ಲ, ಅದು ಮುಖ್ಯವೂ ಅಲ್ಲ. ನಾನು ಕನ್ನಡಿಗನಾಗಿರದೇ ಇದ್ದರೂ ಕನ್ನಡಿಗರ ಬಗ್ಗೆ ಪ್ರೀತಿ ಇದೆ. ಅದೇ ಕಾರಣಕ್ಕಾಗಿ ನಾನು ರಾಜ್ಯದ ಪರ ವಾದ ಮಾಡುತ್ತಿದ್ದೇನೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು ಎಂದು ತಿಳಿದು ಬಂದಿದೆ. ಸಚಿವ ಎಂ.ಬಿ.ಪಾಟೀಲ್ ನಡೆಸಿದ ಮನವೊಲಿಕೆ ಯತ್ನ ಕೊನೆಗೆ ಫಲ ನೀಡಿತ್ತು. ಸಿಎಂ ಸಿದ್ದರಾಮಯ್ಯ ಅವರು ನಾರಿಮನ್ ಅವರ ಜೊತೆ ಮಾತನಾಡಿದ್ದಾರೆ. ಕೊನೆಗೆ ನಾರಿಮನ್ ವಾದಕ್ಕೆ ಒಪ್ಪಿಗೆ ಸೂಚಿಸಿದ್ದು, ಇಂದು ಮಧ್ಯಾಹ್ನ ನಡೆದ ವಿಚಾರಣೆಗೆ ಹಾಜರಾದರು.

► Follow us on –  Facebook / Twitter  / Google+

Facebook Comments

Sri Raghav

Admin