2 ಲಕ್ಷ ಮೌಲ್ಯದ ಚಿನ್ನಾಭರಣ-ವಸ್ತುಗಳು ಕಳವು

ಈ ಸುದ್ದಿಯನ್ನು ಶೇರ್ ಮಾಡಿ

theft

 

ದಾವಣಗೆರೆ, ಅ.4- ಗ್ರಾಮ ಲೆಕ್ಕಾಧಿಕಾರಿಯ ಮನೆ ಬೀಗ ಒಡೆದು ನುಗ್ಗಿದ ದರೋಡೆಕೋರರು 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತಿತರ ವಸ್ತುಗಳನ್ನು ಕದ್ದು ಪರಾರಿಯಾಗಿರುವ ಘಟನೆ ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಪಟ್ಟಣದ ಕಾಗತೂರು ರಸ್ತೆಯಲ್ಲಿರುವ ರಂಭಾಪುರಿ ಬಡಾವಣೆ ವಾಸಿ ಗ್ರಾಮ ಲೆಕ್ಕಾಧಿಕಾರಿ ಕುಮಾರ್‍ನಾಯಕ್‍ಗೆ ಸೇರಿದ ಮನೆಯಲ್ಲಿ ದರೋಡೆ ನಡೆದಿದೆ.ಗ್ರಾಮ ಲೆಕ್ಕಾಧಿಕಾರಿ ಕುಮಾರ್‍ನಾಯಕ್ ಕೆಲಸದ ನಿಮಿತ್ತ ಪಟ್ಟಣದ ರಂಭಾಪುರಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ತಮ್ಮ ಸ್ವಂತ ಊರಾದ ಕರೆಕಟ್ಟೆಗೆ ಕುಟುಂಬ ಸಮೇತರಾಗಿ ಹೋಗಿದ್ದ ಸಂದರ್ಭದಲ್ಲಿ ದರೋಡೆಕೋರರು ಮನೆಗೆ ನುಗ್ಗಿ ಚಿನ್ನಾಭರಣಗಳು, ಲ್ಯಾಪ್‍ಟಾಪ್ ಸೇರಿದಂತೆ 2 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

► Follow us on –  Facebook / Twitter  / Google+

 

 

 

Facebook Comments

Sri Raghav

Admin