ಕನ್ನಡ ಬಿಗ್‍ಬಾಸ್- 4ನಲ್ಲಿ ಭಾಗವಹಿಸಲಿರುವ ಆ 15 ಜನ ಸೆಲಿಬ್ರಿಟಿಗಳು ಯಾರು..?

ಈ ಸುದ್ದಿಯನ್ನು ಶೇರ್ ಮಾಡಿ

Bigg-Bosss

ಬಹು ನಿರೀಕ್ಷಿತ ಬಿಗ್‍ಬಾಸ್ ಸೀಜನ್-4 ರಿಯಾಲಿಟಿ ಶೋ ಇದೇ ಅಕ್ಟೋಬರ್ 9ರಿಂದ ಆರಂಭವಾಗುತ್ತಿದೆ. ಎಂದಿನಂತೆ ಪುನಃ ಕಿಚ್ಚ ಸುದೀಪ್ ಅವರೇ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಂಜೆ 6 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಈ ಬಾರಿ ಒಟ್ಟು 15ಜನ ಸೆಲಿಬ್ರಿಟಿಗಳು ಬಿಗ್‍ಬಾಸ್ ಮನೆಗೆ ತೆರಳಲಿದ್ದಾರೆ. ಈಗಾಗಲೇ ಒಂದಷ್ಟು ಜನ ಸ್ಪರ್ಧಿಗಳು ಹೋಗುತ್ತಿದ್ದಾರೆಂದು ಸುದ್ದಿಯಾಗಿದ್ದರೂ ಅಧಿಕೃತವಾಗಿ ಕಲರ್ಸ್ ವಾಹಿನಿ ಯಾವುದೇ ಪಟ್ಟಿಯನ್ನು ಬಿಡುಗಡೆಗೊಳಿಸಿಲ್ಲ. ಆದರೆ ಒಂದಿಷ್ಟು ಜನರ ಲೀಸ್ಟ್ ಹೊರಗಡೆ ಬಂದರೂ ಅಂತಿಮವಾಗಿ ತಿಳಿಯುವುದು ಟೆಲಿಕಾಸ್ಟ್ ಆಗುವ ದಿನವೇ. ಈ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲೆಂದು ಮೊನ್ನೆ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು.
ಇಲ್ಲಿನ ಮತ್ತೊಂದು ವಿಶೇಷತೆ ಏನೆಂದರೆ ಬಿಗ್‍ಬಾಸ್‍ನ ಪ್ರತಿ ಸೀಜನ್‍ನ ನಿರೂಪಣೆಯನ್ನು ಕಿಚ್ಚ ಸುದೀಪ್ ಅವರೇ ಮಾಡುತ್ತಿರುವುದು. ಸತತವಾಗಿ 4ನೆ ಬಾರಿಗೆ ಅವರು ಈ ಕಾರ್ಯಕ್ರಮದ ನಿರೂಪಣೆಯನ್ನು ಮಾಡುತ್ತಿದ್ದಾರೆ.

ಈ ಸಲದ ಬಿಗ್‍ಬಾಸ್‍ನ ವಿಶೇಷತೆಗಳ ಬಗ್ಗೆ ಮಾತನಾಡುತ್ತ, ಈ ಹಿಂದಿನ ಶೋಗಳಲ್ಲಿ ಭಾಗವಹಿಸುವಾಗ ನಾನು ಬಹಳಷ್ಟು ಕಷ್ಟಪಟ್ಟು ಸಮಯ ಒಂದುಗೂಡಿಸಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೆ. ಕಳೆದ ಬಾರಿಯಿಂದ ಸ್ವಲ್ಪ ನಿರಾಳವಾಗಿದೆ. ಏಕೆಂದರೆ, ಬಿಗ್‍ಬಾಸ್ ಶೋ ನಡೆಯುತ್ತಿರುವುದು ಬಿಡದಿಯ ಇನೋವೇಟಿವ್ ಫಿಲಂ ಸಿಟಿಯಲ್ಲಿ. ಹಾಗಾಗಿ ಪಕ್ಕಾ ಸಮಯ ಮಾಡಿಕೊಂಡು ಪ್ರತಿದಿನದ ಸಂಚಿಕೆಯನ್ನು ನೋಡುತ್ತ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗುತ್ತಿತ್ತು. ಜತೆಗೆ ಒತ್ತಡವಿಲ್ಲದೆ ಕೆಲಸ ಮಾಡಬಹುದು. ಈ ಬಾರಿಯೂ ಕೂಡ ಹೊಸ ಮುಖಗಳು, ಹೊಸ ಅನುಭವದ ಜತೆಗೆ ನಾನು ಹೆಜ್ಜೆ ಹಾಕುತ್ತಿದ್ದೇನೆ ಎಂದು ಹೇಳಿಕೊಂಡರು.

ವಯಾಕಾಂ 18ನ ರವೀಶ್‍ಕುಮಾರ್ ಮಾತನಾಡಿ, ಫೈನಲ್ ಆಗಿ ಯಾರು ಗೆಲ್ಲುತ್ತಾರೆ ಎಂಬ ಬಗ್ಗೆ ವೀಕ್ಷಕರಲ್ಲಿ ಒಂದಷ್ಟು ಅನುಮಾನಗಳಿವೆ. ಇದು ನಮಗೂ ಗೊತ್ತಿರುವುದಿಲ್ಲ. ಕಾರ್ಯಕ್ರಮ ನಡೆಯುವ ಒಂದು ಗಂಟೆಗೂ ಮುಂಚೆಯಷ್ಟೇ ಆ ಹೆಸರು ನಮ್ಮ ಕೈಗೆ ಬರುತ್ತದೆ ಎಂದು ಹೇಳಿದರು. ಪರಮೇಶ್ವರ ಗುಂಡ್ಕಲ್ ಮಾತನಾಡಿ, ಪ್ರತಿ ಬಾರಿಗಿಂತ ಈ ಸಲದ ಬಿಗ್‍ಬಾಸ್ ಷೋ ತುಂಬಾ ವಿಶೇಷವಾಗಿರುತ್ತದೆ. ಅಲ್ಲದೆ ರಾಜಕೀಯ, ಸಿನಿಮಾ, ಸ್ಪೋಟ್ರ್ಸ್, ಜರ್ನಲಿಸ್ಟ್, ಸಿಂಗರ್ಸ್ ಸೇರಿದಂತೆ ವಿವಿಧ ವಿಭಾಗಗಳಿಂದ ಒಬ್ಬೊಬ್ಬರಂತೆ ಇಲ್ಲಿ ಭಾಗವಹಿಸಲಿದ್ದಾರೆ. ಎಂದಿನಂತೆ 100 ದಿನಗಳಲ್ಲಿ ನಡೆಯುವ ಷೋ ಇದಾಗಿದೆ ಎಂದು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin