ಕಿಟಕಿ ಸರಳು ಮೀಟಿ ಮನೆಗೆ ನುಗ್ಗಿದ ಚೋರರು : 8 ಲಕ್ಷ ಹಣ, 600 ಗ್ರಾಂ ಚಿನ್ನಾಭರಣ ಕಳವು

ಈ ಸುದ್ದಿಯನ್ನು ಶೇರ್ ಮಾಡಿ

KALLA

ಬೆಂಗಳೂರು, ಅ.5- ಕಿಟಕಿ ಸರಳು ಮೀಟಿ ಮನೆಯೊಳಗೆ ನುಸುಳಿದ ಚೋರರು ಬೀರುವನ್ನು ಒಡೆದು 8 ಲಕ್ಷ ನಗದು ಹಾಗೂ 700 ಗ್ರಾಂ ತೂಕದ ಚಿನ್ನಾಭರಣ ಕದ್ದೊಯ್ದಿರುವ ಘಟನೆ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವರ್ತೂರಿನ 9ನೆ ಕ್ರಾಸ್, ಬಡಗೇರಿ ರಸ್ತೆಯ ನಿವಾಸಿ ಅಶ್ವಥ್ ಖಾಸಗಿ ಕಂಪೆನಿ ನೌಕರರಾಗಿದ್ದು, ಇವರು ಎಂದಿನಂತೆ ನಿನ್ನೆ ಬೆಳಗ್ಗೆ ಕೆಲಸಕ್ಕೆ ಹೋಗಿದ್ದಾರೆ. ಇವರ ಪತ್ನಿ 11.30ರಲ್ಲಿ ಕಾರ್ಯನಿಮಿತ್ತ ಮನೆಗೆ ಬೀಗ ಹಾಕಿಕೊಂಡು ಕೋರಮಂಗಲಕ್ಕೆ ತೆರಳಿದ್ದಾರೆ.

ಈ ಸಂದರ್ಭದಲ್ಲಿ ಇವರ ಮನೆಯ ಕಿಟಕಿ ಸರಳು ಮೀಟಿ ಒಳನುಗ್ಗಿದ ಚೋರರು ಬೀರುವನ್ನು ಒಡೆದು ಅದರಲ್ಲಿದ್ದ 8 ಲಕ್ಷ ಹಣ ಹಾಗೂ 600 ರಿಂದ 700 ಗ್ರಾಂ ತೂಕದ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾರೆ. ರಾತ್ರಿ 8.30ರಲ್ಲಿ ಇವರು ಮನೆಗೆ ವಾಪಸಾದಾಗ ಕಳ್ಳತನ ನಡೆದಿರುವುದು ಗಮನಕ್ಕೆ ಬಂದು ತಕ್ಷಣ ವರ್ತೂರು ಪೊಲೀಸರಿಗೆ ತಿಳಿಸಿದ್ದಾರೆ. ವರ್ತೂರು ಠಾಣೆ ಪೊಲೀಸರು ಹಾಗೂ ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗೆ ವ್ಯಾಪಕ ಬಲೆ ಬೀಸಿದ್ದಾರೆ. ಈ ಕಳ್ಳತನ ಬೆಳಗ್ಗೆ 11.30 ರಿಂದ ರಾತ್ರಿ 8.30ರ ಮಧ್ಯೆ ನಡೆದಿದೆ.

► Follow us on –  Facebook / Twitter  / Google+

Facebook Comments

Sri Raghav

Admin