ಕ್ರಿಕೆಟ್ ಆಡಿ ಬೈಕ್‍ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಇಬ್ಬರು ಯುವಕರು ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

deadly--accident

ಮಧುಗಿರಿ, ಅ.5- ಕ್ರಿಕೆಟ್ ಆಡಿ ಬೈಕ್‍ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ದುರ್ಮರಣ ಹೊಂದಿರುವ ಘಟನೆ ಶಿರಾ ರಸ್ತೆಯ ಕೈಮರ ಬಳಿ ನಡೆದಿದೆ.ಮೃತನನ್ನು ಸ್ವರೂಪ್ (23), ಶ್ರೀನಿವಾಸ (22) ಎಂದು ಗುರುತಿಸಲಾಗಿದೆ. ಸ್ಥಳೀಯ ಯುವಕರ ಗುಂಪು ಕ್ರಿಕೆಟ್ ಆಡಲು ತೆರಳಿತ್ತು. ಸಂಜೆ 7 ಗಂಟೆಗೆ ಮನೆಗೆ ಎಲ್ಲರೂ ತಮ್ಮ ದ್ವಿಚಕ್ರ ವಾಹನಗಳಲ್ಲಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್‍ನ್ನು ನೋಡದೆ ಎರಡು ಬೈಕ್‍ಗಳು ಡಿಕ್ಕಿ ಹೊಡೆದಿದ್ದು, ಇದರಲ್ಲಿ ಸ್ವರೂಪ್ ಶ್ರೀನಿವಾಸ್ ಸೇರಿದಂತೆ ಮೂವರು ತೀವ್ರವಾಗಿ ಗಾಯಗೊಂಡಿದ್ದರು.ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ತಡರಾತ್ರಿ ಅಸು ನೀಗಿದ್ದಾರೆ ಎಂದು ತಿಳಿದು ಬಂದಿದೆ.ಇವರೆಲ್ಲರೂ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಎಂದು ಪೊ ಲೀಸರು ತಿಳಿಸಿದ್ದಾರೆ. ಮಧುಗಿರಿ ತಾಲ್ಲೂಕಿನ ಬಡವನಹಳ್ಳಿ ಪೊ ಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin