ತಾಲೂಕು ಮಟ್ಟದಲ್ಲಿ ಅಹಿಂದ ಸಮಾವೇಶ..!

ಈ ಸುದ್ದಿಯನ್ನು ಶೇರ್ ಮಾಡಿ

AHINDA
ಬೆಂಗಳೂರು, ಅ.5- ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಯಶಸ್ಸಿನಿಂದ ಗಲಿಬಿಲಿಗೊಂಡಿರುವ ಕಾಂಗ್ರೆಸ್ ತಾಲೂಕು ಮಟ್ಟದಲ್ಲಿ ಅಹಿಂದ ಘಟಕಗಳಿಂದ ಸಮಾವೇಶ ನಡೆಸಿ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಮುಂದಾಗಿದೆ.  ಕಾಂಗ್ರೆಸ್ ಕಚೇರಿಯಲ್ಲಿಂದು ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಮಂಜುನಾಥ್, ಪರಿಶಿಷ್ಟ ಪಂಗಡದ ಅಧ್ಯಕ್ಷ ಈಶ್ವರ್, ಅಲ್ಪಸಂಖ್ಯಾತರ ಅಧ್ಯಕ್ಷ ಸೈಯದ್ ಅಹಮದ್, ಒಬಿಸಿ ವಿಭಾಗದ ಎಂ.ಸಿ.ವೇಣುಗೋಪಾಲ್ ಅವರುಗಳು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಶ್ವರಪ್ಪ ಅವರು ಸ್ಥಾಪಿಸಿರುವ ಸಂಗೊಳ್ಳಿರಾಯಣ್ಣ ಬ್ರಿಗೇಡ್‌ನ ಬಣ್ಣ ರಾಜ್ಯದ ಜನರಿಗೆ ಗೊತ್ತಿದೆ. ಅಹಿಂದ ವರ್ಗದ ಬದಲಾಗಿ ಹಿಂದ ಸಂಘಟನೆ ಮಾಡುತ್ತಿರುವ ಈಶ್ವರಪ್ಪನವರು ಬಿಜೆಪಿಯನ್ನು ಅಕಾರಕ್ಕೆ ತರಲು ರಾಯಣ್ಣ ಬ್ರಿಗೇಡ್ ಶ್ರಮಿಸಲಿದೆ ಎನ್ನುತ್ತಾರೆ. ಬಿಜೆಪಿಯವರು ರಾಯಣ್ಣ ಬ್ರಿಗೇಡ್ ನಮಗೂ ಸಂಬಂಧವಿಲ್ಲ ಎನ್ನುತ್ತಾರೆ. ಈ ಗೊಂದಲದ ನಡುವೆ ಈಶ್ವರಪ್ಪನವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ರಾಯಣ್ಣ ಬ್ರಿಗೇಡ್ ಸ್ಥಾಪಿಸಿದ್ದಾರೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ನಿಂದ ಮಾತ್ರ ಅಹಿಂದಾ ರಕ್ಷಣೆ ಸಾಧ್ಯ. ಹಿಂದೆ ಬಿಜೆಪಿ ಸರ್ಕಾರಕ್ಕಿಂತಲೂ ಸಿದ್ದರಾಂಯ್ಯ ಅವರ ಸರ್ಕಾರ ಅಹಿಂದಾ ವರ್ಗಕ್ಕೆ ಹೆಚ್ಚಿನ ಕೊಡುಗೆಗಳನ್ನು ನೀಡಿದೆ ಎಂದು ಹೇಳಿದರು. ಈಶ್ವರ್ ಅವರು ಮಾತನಾಡಿ, ರಾಯಣ್ಣನನ್ನು ರಾಜಕೀಯ ವಿಚಾರಕ್ಕೆ ತರುವುದು ಸರಿಯಲ್ಲ. ಬೇಕಾದರೆ ಈಶ್ವರಪ್ಪ ಅಥವಾ ಯಡಿಯೂರಪ್ಪ ಬ್ರಿಗೇಡ್ ಎಂದು ಮಾಡಿಕೊಂಡು ಸಂಘಟನೆ ಮಾಡಿ ಎಂದು ತಿರುಗೇಟು ನೀಡಿದರು. ನಾಲ್ಕು ಮುಂಚೂಣಿ ಘಟಕಗಳು ರಾಜ್ಯದ ಎಲ್ಲಾ ತಾಲೂಕು ಮಟ್ಟದಲ್ಲೂ ಸಮಾವೇಶ ಮಾಡುವ ಮೂಲಕ ರಾಯಣ್ಣ ಬ್ರಿಗೇಡ್‌ಗೆ ತಕ್ಕ ಉತ್ತರ ನೀಡಲಿದೆ ಎಂದು ತಿಳಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin