ನೀರು ಪೂರೈಕೆ ಅವ್ಯವಸ್ಥೆ ಸರಿಪಡಿಸುವ ಭರವಸೆ

ಈ ಸುದ್ದಿಯನ್ನು ಶೇರ್ ಮಾಡಿ

3
ಬೆಳಗಾವಿ,ಅ.5- ನೀರು ಪೂರೈಕೆಯಲ್ಲಿ ಆಗುತ್ತಿರುವ ತಾರತಮ್ಯ ಹಾಗೂ ಅವ್ಯವಸ್ಥೆಯನ್ನು ಸರಿಪಡಿಸುವುದಾಗಿ ರಾಜ್ಯ ನಗರಾಭಿವೃದ್ಧಿ ಸಚಿವ ರೋಶನ್ ಬೇಗ್ ಇಂದು ನಗರದ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಮುಖಂಡರಿಗೆ ಭರವಸೆ ನೀಡಿದ್ದಾರೆ.ಬೆಂಗಳೂರಿನ ವಿಕಾಸಸೌಧದಲ್ಲಿ ಈ ಸಂಬಂಧ ಸಚಿವರ ಜೊತೆ ಕ್ರಿಯಾ ಸಮಿತಿ ಮುಖಂಡರು ಚರ್ಚೆ ನಡೆಸಿದರು.ನಗರದ ಬಹುತೇಕ ಕಡೆಗೆ ವಾರಕ್ಕೊಮ್ಮೆ ನೀರು ಪೂರೈಕೆಯಾದರೆ, ಕೆಲವು ಕಡೆ ದಿನನಿತ್ಯ ನೀರು ದೊರೆಯುತ್ತಿದೆ. ಈ ಅಸಮರ್ಪಕ ಹಾಗೂ ತಾರತಮ್ಯದ ವ್ಯವಸ್ಥೆ ಸರಿಪಡಿಸಿ ಎಲ್ಲರಿಗೂ ಸರಿಯಾದ ಹಾಗೂ ಸಮಾನವಾಗಿ ನೀರು ಪೂರೈಸಬೇಕೆಂದು ಕ್ರಿಯಾ ಸಮಿತಿಯು ಸಚಿವರನ್ನು ಆಗ್ರಹಿಸಿತು.

ನಾಳೆ ನಗರ ನೀರು ಸರಬರಾಜು ಮಂಡಳಿಯ ಸಭೈಯಲ್ಲಿ ಈ ವಿಷಯ ಚರ್ಚಿಸಿ ನಿರ್ಣಯ ಕೈಕೊಳ್ಳಲಾಗುವುದೆಂದು ಸಚಿವರು ಭರವಸೆ ನೀಡಿದ್ದಾರೆ. ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದ ವಿಷಯಗಳ ಕುರಿತೂ ಸಹ ಚರ್ಚಿಸಲಾಯಿತು. ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ, ಎಮ.ಜಿ. ಮಕಾನದಾರ, ಶಿವಪ್ಪ ಶಮರಂತ, ಶಂಕರ ಬಾಗೇವಾಡಿ ಹಾಗೂ ವಿರೇಂದ್ರ ಗೋಬರಿ ಈ ಸಂದರ್ಭದಲ್ಲಿ ಹಾಜರಿದ್ದರು.

 

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin