ಪಿಂಪಲ್ ನಿವಾರಣೆಗೆ ಇಲ್ಲಿವೆ ಸಿಂಪಲ್ ಟಿಪ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Pimple

ಹದಿ ಹರೆಯದವರಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆಗಳ ಪೈಕಿ ಮೊಡವೆ ಸಮಸ್ಯೆಯು ಕೂಡ ಒಂದು. ವಿಶೇಷವಾಗಿ ಬಾಲ್ಯಾವಸ್ಥೆ ಕಳೆದು ಪ್ರೌಢಹಂತಕ್ಕೆ ಕಾಲಿಡುವ ಗಂಡು ಹೆಣ್ಣಿನ ಮುಖದಲ್ಲಿ ಮೊಡವೆ ಮೂಡುತ್ತಿರುವುದು ಪ್ರೌಢತೆಯ ಲಕ್ಷಣ. ಆದರೆ ಪ್ರೌಢ ಹಂತಕ್ಕೆ ಬರುವ ಹೆಣ್ಣು ತನ್ನ ಸೌಂದರ್ಯದತ್ತ ವಿಶೇಷ ಆಸಕ್ತಿ ವಹಿಸಲು ಶುರು ಮಾಡುತ್ತಾಳೆ. ತನ್ನ ಮುಖದ ತುಂಬೆಲ್ಲಾ ಮೂಡುವ ಮೊಡವೆ ಆಕೆಯನ್ನು ಸದಾ ಕಾಡತೊಡಗುತ್ತದೆ. `ಮೊಡವೆ ಯೌವ್ವನದ ಒಡವೆ’ ಎಂದು ಹಾಸ್ಯಚಟಾಕಿ ಹಾರಿಸುವುದೂ ಇದೆ. ಆದರೆ ಇದುವರೆಗೂ ಯಾವ ಹೆಣ್ಣು ಕೂಡ ಮೊಡವೆಯನ್ನು ತನ್ನ ಒಡವೆಯೆಂದು ಒಪ್ಪಿಕೊಂಡಿಲ್ಲ. ಏನಿದ್ದರೂ ಅವಳ ಗಮನ ಈ ಮೊಡವೆಯನ್ನು ದೂರ ಮಾಡುವುದೊಂದೇ.

ಕೆಲವೊಮ್ಮೆ ಹೆಣ್ಣು ಮೊಡವೆ ಕಂಡು ತನ್ನ ಮೇಲೆಯೇ ಕೀಳರಿಮೆ ಬೆಳೆಸಿಕೊಳ್ಳುವುದೂ ಇದೆ. ಮೊಡವೆ ಹೋದರೆ ಸಾಕು ಎಂದು ಇದನ್ನು ತಡೆಗಟ್ಟಲು ಇನ್ನಿಲ್ಲದ ಕಸರತ್ತು ಮಾಡುತ್ತಾರೆ.
ಮುಖದ ಒಂದು ಕಡೆಯಲ್ಲಿ ಸಣ್ಣ ಮೊಡವೆ ಮೂಡಿದರೂ ತಕ್ಷಣವೇ ವಿಚಲಿತವಾಗುವ ಹೆಣ್ಣು ಇನ್ನು ಮುಖದ ಮೊಡವೆಗಳನ್ನು ಹೋಗಲಾಡಿಸಲು ಮಾಡುವ ಕಸರತ್ತುಗಳು ಒಂದೆರಡಲ್ಲ… ಸುಮ್ಮನೆ ಸಿಕ್ಕ ಸಿಕ್ಕ ಕ್ರೀಂ ಗಳಿಗೆ ನೂರಾರು, ಸಾವಿರಾರು ರೂಪಾಯಿಗಳನ್ನು ವೆಚ್ಚ ಮಾಡುವುದಕ್ಕಿಂತ ಮನೆಯಲ್ಲಿಯೇ ಇದನ್ನು ತಡೆಗಟ್ಟುವತ್ತ ಸ್ವಲ್ಪ ಗಮನಹರಿಸಿದರೆ ಸಾಕು.
ಮೊಟ್ಟೆಯ ಹಳದಿ, ಮಾಂಸಾ ಹಾರವನ್ನು ಆದಷ್ಟು ತ್ಯಜಿಸಿ. ಅದರ ಬದಲು ನಿಮ್ಮ ಪ್ರತಿ ನಿತ್ಯದ ಆಹಾರದಲ್ಲಿ ತರಕಾರಿಗಳು ಹಣ್ಣುಹಂಪಲುಗಳನ್ನು ಬಳಸಿ. ಇದು ನಿಮ್ಮ ತ್ವಚೆಯನ್ನು ರಕ್ಷಿಸುತ್ತದೆ ಹಾಗೂ ಮೊಡವೆಗಳು ಬರದಂತೆ ತಡೆಗಟ್ಟುತ್ತದೆ.

ಕಡಲೆ ಹಿಟ್ಟು, ಮುಲ್ತಾನಿ ಮಿಟ್ಟಿಯನ್ನು ಸಮ ಪ್ರಮಾಣದಲ್ಲಿ ಬೆರೆಸಿ ಆ ಪುಡಿಯನ್ನು ಹಸಿ ಹಾಲಿನಲ್ಲಿ ಒಂದು ಚಮಚದಷ್ಟು ಹಾಕಿ ಮುಖಕ್ಕೆ ಹಚ್ಚಿಕೊಂಡು ಕೈಬೆರಳಿನಿಂದ ಮಸಾಜï ಮಾಡಿ. ಈ ರೀತಿ ವಾರಕ್ಕೆ ಎರಡು ಮೂರು ಬಾರಿ ಮಾಡಿದರೆ ಮೊಡವೆ ಹಾವಳಿಯಿಂದ ಮುಕ್ತಿ ಹೊಂದಬಹುದು. ತಿಂಗಳಿಗೊಮ್ಮೆಯಾದರೂ ಮುಖಕ್ಕೆ ಫೇಶಿಯಲï ಮಾಡಿಸುವುದರಿಂದ ಮೊಡವೆಗಳನ್ನು ತಡೆಗಟ್ಟಬಹುದು. ಆದರೆ ಮೊಡವೆಗಳು ಮುಖದಲ್ಲಿ ಹೆಚ್ಚಿದ್ದರೆ ಮುಖಕ್ಕೆ ಸ್ಟೀಮಿಂಗ್ ಜಾಸ್ತಿ ತೆಗೆದುಕೊಳ್ಳಬೇಡಿ. ಕಲೆಗಳ ಮೇಲೆ ಜೇನುತುಪ್ಪ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ. ಈ ರೀತಿ ಪ್ರತಿನಿತ್ಯ ಮಾಡಿದರೆ ಕಲೆಗಳನ್ನು ದೂರ ಮಾಡುತ್ತದೆ. ಗುಲಾಬಿ ಹೂವಿನ ದಳಗಳನ್ನು ಪನ್ನೀರಿನಲ್ಲಿ ರುಬ್ಬಿ ಮೊಡವೆಗಳಿರುವ ಜಾಗಗಳಿಗೆ ಹಚ್ಚಿದರೆ ಮೊಡವೆಗಳು ದೂರ ಆಗುತ್ತದೆ.
ಜೇನುತುಪ್ಪಕ್ಕೆ ಕಡಲೆ ಹಿಟ್ಟು ಸೇರಿಸಿ ಮೊಡವೆ ಇರುವಲ್ಲಿ ಲೇಪಿಸಿ ನಂತರ ಬಿಸಿನೀರಿನಿಂದ ಮುಖ ತೊಳೆಯಿರಿ. ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದು ಉಗುರುಬೆಚ್ಚಗೆ ಇರುವಾಗ ಮುಖ ತೊಳೆಯಿರಿ. ಟೊಮೊಟೊ ಪ್ರತಿನಿತ್ಯ ಮುಖಕ್ಕೆ ತಿಕ್ಕುವುದರಿಂದ ಮುಖದ ಚರ್ಮ ಮೃದುವಾಗುವುದಲ್ಲದೆ ಹೊಳೆಯುತ್ತದೆ ಮತ್ತು ಮೊಡವೆಗಳನ್ನು ತಡೆಗಟ್ಟಬಹುದು.

ಚಳಿಗಾಲದ ಮೊಡವೆ ಭೂತ :
ಚಳಿಗಾಲದಲ್ಲಿ ಅಂದದ ಮುಖಕ್ಕೆ ಮೊಡವೆ ಭೂತ ಕೇವಲ ಬೇಸಿಗೆಯಲ್ಲಷ್ಟೇ ಅಲ್ಲ , ಚಳಿಗಾಲದ ಒಣ ಚರ್ಮದಲ್ಲೂಮೊಡವೆಎಂಬ ಭೂತಕಾಡುತ್ತೆ. ಮೊಡವೆ ನಿವಾರಣೆಗೆ ನೀವು ಮಾಡಬೇಕಾದದ್ದು ಇಷ್ಟೆ. ಉಗುರು ಬೆಚ್ಚಗಿನ ನೀರಿನಿಂದ ನಿಮ್ಮ ಮುಖವನ್ನು ಆಗಾಗ ತೊಳೆಯುತ್ತಿರಬೇಕು. ಹೊರಗೆಹೋಗಿ ಬಂದ ತಕ್ಷಣ ಬೆಚ್ಚಗಿನ ನೀರಿನಲ್ಲಿ ಮುಖವನ್ನು ಸ್ವಚ್ಛಗೊಳಿಸಿಕೊಳ್ಳಿ. ಉಗುರು ಬೆಚ್ಚಗಿನ ನೀರು ನಿಮ್ಮ ಚರ್ಮಕ್ಕೆ ಅಂಟಿರುವಎಣ್ಣೆಯಂಶ ಮತ್ತು ಧೂಳನ್ನು ತೊಳೆದುಹಾಕುತ್ತದೆ. ನಿಮ್ಮ ಚರ್ಮಕೋಮಲ ಮತ್ತು ಮೃದುವಾಗಲು ಸಹಕಾರಿ.
ಚಳಿಗಾಲದಲ್ಲಿ ಹಗುರ ತೂಕದ ಮಾಯಿಶ್ಚರೈರ್ಸ ಬಳಸಿ. ಅದು ನಿಮ್ಮ ಚರ್ಮವನ್ನು ಪೋಷಿಸುತ್ತದೆ . ನಿಮ್ಮ ಚರ್ಮ ರಂಧ್ರಗಳನ್ನು ಶುದ್ಧೀಕರಿಸುತ್ತದೆ . ನಿಮ್ಮ ಚರ್ಮವನ್ನು ಮೃದುಮತ್ತು ನಯವಾಗಿಮಾಡುತ್ತದೆ .

ಬೇವಿನಲ್ಲಿ ಔಷಧಿಗುಣವಿದೆ, ಬೇವು ಉರಿಯೂತ ನಿವಾರಿಸುವ ಶಕ್ತಿ ಹೊಂದಿದೆ. ಹಾಗಾಗಿ ನೀವು ನೀಮ್ ಪೇಸ್ ಪ್ಯಾಕ್ ಬಳಸುವುದರಿಂದ ಮೊಡವೆ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಇದು ಮೊಡವೆ ಏಳುವುದನ್ನು ಕಡಿಮೆಮಾಡುತ್ತದೆ. ಅಲ್ಲದೇ ಮುಖಕ್ಕೆ ನೀಮ್ ಪೇಸ್ ಪ್ಯಾಕ್ ಹಚ್ಚಿಕೊಳ್ಳುವುದರಿಂದ ಮೊಡವೆಯಿಂದಾಗುವ ಕಲೆಗಳು ಇಲ್ಲವಾಗುತ್ತವೆ.

► Follow us on –  Facebook / Twitter  / Google+

Facebook Comments

Sri Raghav

Admin