ಪಿಡಿಪಿ ಶಾಸಕನ ಮನೆ ಮೇಲೆ ಉಗ್ರರ ಗ್ರೆನೇಡ್ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Graned

ಶ್ರೀನಗರ, ಅ.5-ಕಾಶ್ಮೀರ ಕಣಿವೆಯಲ್ಲಿ ದಾಳಿಗಳನ್ನು ತೀವ್ರಗೊಳಿಸುತ್ತಿರುವ ಉಗ್ರಗಾಮಿಗಳು ನಿನ್ನೆ ರಾತ್ರಿ ಶೋಪಿಯಾನ್ ನಗರದಲ್ಲಿ ಆಡಳಿತರೂಢ ಪಿಡಿಪಿ ಶಾಸಕ ಮಹಮದ್ ಯೂಸುಫ್ ಭಟ್ ನಿವಾಸದ ಆವರಣದಲ್ಲಿ ಗ್ರೆನೇಡ್ ಸ್ಪೋಟಿಸಿದ್ದಾರೆ. ಈ ಸ್ಫೋಟದಲ್ಲಿ ಅನಾಹುತವಾಗಿಲ್ಲ.  ಶೋಪಿಯಾನ್ ಪಟ್ಟಣದಲ್ಲಿರುವ ಶಾಸಕರ ನಿವಾಸದ ಮೇಲೆ ನಿನ್ನೆ ರಾತ್ರಿ 11.10ರಲ್ಲಿ ದಾಳಿ ನಡೆಸಲು ಯತ್ನಿಸಿದ ಉಗ್ರರು ಗ್ರೆನೇಡ್ ಎಸೆದು ಪರಾರಿಯಾದರು. ಮನೆಯ ಕಾಂಪೌಂಡ್‍ನಲ್ಲಿ ಗ್ರೆನೇಡ್ ಸ್ಫೋಟಗೊಂಡಿದ್ದರಿಂದ ಯಾವುದೇ ಹಾನಿ ಸಂಭವಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಯೋಧ ಸಾವು :
ಬಾರಾಮುಲ್ಲಾದಲ್ಲಿ ಭಾನುವಾರ ರಾಷ್ಟ್ರೀಯ ರೈಫಲ್ಸ್ ಶಿಬಿರದ ಮೇಲೆ ಉಗ್ರರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ನಿತೀನ್ ಎಂಬ ಓರ್ವ ಯೋಧ ಮೃತನಾಗಿರುವುದನ್ನು ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಮುಖ್ಯಸ್ಥ ಕೆ.ಕೆ.ಶರ್ಮಾ ಖಚಿತಪಡಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin