ಹಸಿಬಿಸಿ ಸಿನಿಮಾಗಳ ತಾರೆ ಸನ್ನಿ ಲಿಯೋನ್ ಈಗ ‘ಹಂಟರ್ ರಾಣಿ’

ಈ ಸುದ್ದಿಯನ್ನು ಶೇರ್ ಮಾಡಿ

Sunny-Leon

ಹಸಿಬಿಸಿ ಸಿನಿಮಾಗಳ ತಾರೆ ಸನ್ನಿ ಲಿಯೋನ್ ಈಗ ಹಂಟರ್ ರಾಣಿ. ಈ ಟೈಟಲ್ ಕೇಳಿದೊಡನೆ ಸೆಕ್ಸಿ ಸನ್ನಿ ರಿವೇಂಜ್ ಸಿನಿಮಾದಲ್ಲಿ ನಟಿಸಲು ಸಹಿ ಹಾಕಿದ್ದಾಳಾ ಎಂಬ ಅನುಮಾನ ಬರುವುದು ಸಹಜ. ಆದರೆ ಈಕೆ ಹಂಟರ್ ರಾಣಿಯಾದರೂ ನಟಿಸುತ್ತಿರುವುದು ಕಾಮಿಡಿ ಸಿನಿಮಾದಲ್ಲಿ. ಗುಂಟೂರು ಟಾಕೀಸ್-2 ಎಂಬ ತೆಲುಗು ಕಾಮಿಡಿ ಡ್ರಾಮಾದಲ್ಲಿ ಈಕೆ ಹಂಟರ್ ರಾಣಿಯ ಪ್ರಾತ ಮಾಡುತ್ತಿದ್ದಾಳೆ ಸನ್ನಿ ಪುರುಷರನ್ನು ಬೇಟೆಯಾಡುವ ಹಂಟರ್ ರಾಣಿಯೋ ಅಥವಾ ಇನ್ನಾವ ರಾಣಿಯೋ ಎಂಬ ಬಗ್ಗೆ ನಿರ್ದೇಶಕ ರಾಜ್‌ಕುಮಾರ್ ತುಟಿ ಬಿಚ್ಚಿಲ್ಲ. ಗುಂಟೂರು ಟಾಕೀಸ್ ಮೊದಲ ಭಾಗ ಯಶಸ್ವಿಯಾಗಿದ್ದರೂ ಅದರಲ್ಲಿ ಅಡಲ್ಟ್ ಕಾಮಿಡಿ ಸಾಕಷ್ಟು ಇತ್ತು. ಹೀಗಾಗಿ ಎರಡನೇ ಸ್ವೀಕ್ವೆಲ್‌ನಲ್ಲಿ ಅದಕ್ಕೆ ಬ್ರೇಕ್ ಹಾಕಲು ನಿರ್ಧರಿಸಲಾಗಿದೆ.

ಮನೆಮಂದಿಯೆಲ್ಲ ಕುಳಿತು ನೋಡಬಹುದಾದ ನವಿರು ಹಾಸ್ಯ ಲೇಪನ ಈ ಸಿನಿಮಾದಲ್ಲಿ ಇರಲಿದೆ. ಸನ್ನಿ ಲಿಯೋನ್‌ಗೆ ಈ ಚಿತ್ರದಲ್ಲಿ ವಿಶೇಷ ಪಾತ್ರವಿದೆ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ಸನ್ನಿ ನಟಿಸುತ್ತಾಳೆ ಎಂದ ಮೇಲೆ ಕುಟುಂಬದ ಸದಸ್ಯರಿಗೆಲ್ಲ ಆ ಸಿನಿಮಾ ನೋಡಲು ಸಾಧ್ಯವಾಗುತ್ತದೆಯೇ ಎಂಬುದು ಬೇರೆ ಮಾತು. ಸನ್ನಿ 2014ರಲ್ಲಿ ಕರೆಂಟ್ ತೀಗಾ ಎಂಬ ತೆಲುಗು ಚಿತ್ರದಲ್ಲಿ ನಟಿಸಿ ಗಮನಸೆಳೆದಿದ್ದಳು. ಗುಂಟೂರು ಟಾಕೀಸ್-2ರಲ್ಲಿ ಆಕೆ ಇನ್ನಾವ ರೀತಿ ಆಕರ್ಷಿಸುತ್ತಾಳೆ ಎಂಬುದನ್ನು ಟಾಕೀಸ್‌ಗೇ ಹೋಗಿ ನೋಡಬೇಕು.

► Follow us on –  Facebook / Twitter  / Google+

Facebook Comments

Sri Raghav

Admin