ಹೆಬ್ಬಾವಿನ ಹೋರಾಡಿ ಬದುಕಿ ಬಂದ ಬಾಲಕ..!

ಈ ಸುದ್ದಿಯನ್ನು ಶೇರ್ ಮಾಡಿ

HEbbavu

ಮಂಗಳೂರು ಅ.05 : ಹೆಬ್ಬಾವಿನ ದಾಳಿಯಿಂದ ವಿಚಲಿತನಾಗದ ಬಾಲಕ ಹೋರಾಡಿ ಪ್ರಾಣ ಉಳಿಸಿಕೊಂಡ ಘಟನೆ ಬಂಟ್ವಾಳದ ಸಜೀಪ ಸಮಿಪದ ಕೊಳಕೆಯಲ್ಲಿ ನಡೆದಿದೆ. ಕೊಳಕೆ ಕೂಡೂರು ನಿವಾಸಿ ಸುರೇಶ್‌ರ ಪುತ್ರ ವೈಶಾಖ ಸಾಹಸ ಮೆರೆದ ಬಾಲಕ. ಸಜಿಪ ಆದರ್ಶ ಆಂಗ್ಲ ಮಾಧ್ಯಮ ಶಾಲೆಯ ಐದನೆ ತರಗತಿಯ ವಿದ್ಯಾರ್ಥಿಯಾಗಿರುವ ವೈಶಾಖ ಸಂಜೆ ಶಾಲೆಯಿಂದ ಬಂದು ಸಮೀಪದಲ್ಲೆ ಇರುವ ಅಜ್ಜನ ಮನೆಗೆ ಹೋಗಿದ್ದ. ರಾತ್ರಿ 6 ಗಂಟೆಯ ಹೊತ್ತಿಗೆ ಮನೆಗೆ ಹಿಂದಿರಗುತ್ತಿದ್ದಾಗ ಏಕಾ‌ಏಕಿ ಪೊದೆಯ ನಡುವಿನಿಂದ ಎದ್ದು ಬಂದ ಹೆಬ್ಬಾವು ವೈಶಾಖನ ಮೇಲೆ ದಾಳೆ ನಡೆಸಿತ್ತು. ನೆಲಕ್ಕುರಳಿದ ವೈಶಾಖನಿಗೆ ಸುತ್ತಿಕೊಳ್ಳಲಾರಂಭಿಸಿತ್ತು. ಘಟನೆಯಿಂದ ವಿಚಲಿತನಾಗದ ವೈಶಾಖ, ಅಲ್ಲಿ ಇಲ್ಲಿ ತಡಕಾಡಿ ಹತ್ತಿರವೇ ಬಿದ್ದಿದ್ದ ಕಲ್ಲನ್ನೆತ್ತಿಕೊಂಡು ಹಾವಿನ ಮುಖಕ್ಕೆ ಬಡಿಯ ತೊಡಗಿದ್ದು. ಈತನ ಏಟು ಹಾವಿ ಕಣ್ಣಿಗೂ ತಾಗಿತ್ತು. ಕಲ್ಲಿನ ಪ್ರಹಾರದಿಂದ ಗಾಯಗೊಂಡ ಹಾವು ಆತನನ್ನು ಬಿಟ್ಟು ಓಡಿತ್ತು.

ಹಾವಿನೊಂದಿಗೆ ಸೆಣಸುತ್ತಿದ್ದುದನ್ನು ನೋಡಿದ ಮನೆ ಸಮೀಪದ ಹರ್ಷಿತಾ ಎಂಬ ಬಾಲಕಿ ರಕ್ಷಣೆಗೆ ಧಾವಿಸಿದ್ದಳು ಆದರೆ ವೈಶಾಖ ಆಕೆ ಹತ್ತಿರ ಬರದಂತೆ ತಡೆದಿದ್ದ. ಹಾವಿನಿಂದ ಬಿಡಿಸಿಕೊಂಡ ಬಾಲಕನ್ನು ಹರ್ಷತಾ ಮನೆಗೆ ತಲುಪಿಸಿದ್ದಳು. ಹಾವು ವೈಶಾಖನ ಕೈ, ಕಾಲು, ಮೈಗೆ ಕಚ್ಚಿ ಗಾಯಗೊಳಿಸಿತ್ತು. ಆತನನ್ನು ಕೂಡಲೆ ಹತ್ತಿರದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಒದಗಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತು. ಆತನಿಗೆ ತೀವೃ ನಿಘಾ ಘಟಕದಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ವೈಶಾಖ ಬಾಲ್ಯದಿಂದಲೂ ಪರಾಕ್ರಮಿ. ಯಾವುದಕ್ಕೂ ಹೆದರುವವನಲ್ಲ ಎಂದು ತಂದೆ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin