ಈವಾರ ಥಿಯೇಟರ್’ಗೆ ಬರ್ತಿದ್ದಾನೆ ‘ದನ ಕಾಯೋನು’

ಈ ಸುದ್ದಿಯನ್ನು ಶೇರ್ ಮಾಡಿ

kannada

ಆರ್.ಶ್ರೀನಿವಾಸ್ ಅವರ ನಿರ್ಮಾಣದಲ್ಲಿ ಯೋಗರಾಜ್ ಭಟ್ಟರ ನಿರ್ದೇಶನದ ಚಿತ್ರ ದನಕಾಯೋನು ಈವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಳೆದ ವರ್ಷವೇ ಸೆಟ್ಟೇರಿದ್ದ, ದುನಿಯಾ ವಿಜಯ್ ಮತ್ತು ಪ್ರಿಯಾಮಣಿ ಅಭಿನಯದ ಈ ಸಿನಿಮಾ ನಿಗದಿತ ಸಮಯಕ್ಕೆ ತನ್ನ ಚಿತ್ರೀಕರಣವನ್ನು ಪೂರ್ಣಗೊಳಿಸಿದರೂ ತೆರೆಗೆ ಬರಲು ಸ್ವಲ್ಪ ವಿಳಂಬವಾಗಿತ್ತು. ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ಸಿನಿಮಾ ಬಿಡುಗಡೆಯಾಗಿ ತಿಂಗಳುಗಳೇ ಕಳೆರದಿರಬೇಕಿತ್ತು. ಇದೇ ಭಟ್ಟರ ಮತ್ತು ದುನಿಯಾ ವಿಜಯ್ ಅಭಿಮಾನಿಗಳ ಅಸಮಾಧಾನಕ್ಕೆ ನೇರಾನೇರ ಕಾರಣ.ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸುವ ಯೋಗರಾಜ್ ಭಟ್, ದನ ಕಾಯೋನು ಚಿತ್ರ ನಿಗಧಿತ ಸಮಯಕ್ಕೆ ತೆರೆಗೆ ಬರಲು ತಡವಾಯಿತು ಎಂಬುದನ್ನು ಒಪ್ಪಿಕೊಂಡರು. ಅಲ್ಲದೆ ಚಿತ್ರ ತಡವಾಗಿದ್ದರ ಹಿಂದಿರುವ ಒಂದಷ್ಟು ಕಾರಣಗಳನ್ನು ಪ್ರೇಕ್ಷಕರ ಮುಂದೆ ತೆರೆದಿಡುತ್ತಾರೆ.

ದನ ಕಾಯೋನು ಚಿತ್ರ ನಾವಂದುಕೊಂಡ ಸಮಯಕ್ಕೆ ಚಿತ್ರೀಕರಣ ಮುಗಿಸಿ, ಪೋಸ್ಟ್  ಪ್ರೊಡೆಕ್ಷನ್  ಕೆಲಸಗಳಿಗಾಗಿ ಎಡಿಟಿಂಗ್ ಟೇಬಲ್ ಮೇಲೆ ಬಂದು ಕೂತಿತ್ತು. ಆದರೆ ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಸಮಯ ಗ್ರಾಫಿಕ್ಸ್ ಕೆಲಸಗಳಿಗಾಗಿ ತೆಗೆದುಕೊಂಡಿತು. ಬರೋಬ್ಬರಿ ಮೂರು ತಿಂಗಳ ಸಮಯವನ್ನು ಇದೇ ಕೆಲಸಗಳಿಗಾಗಿ ತೆಗೆದಿರಿಸಬೇಕಾಯಿತು. ಇತ್ತೀಚೆಗಷ್ಟೇ ಅಂತಿಮ ಸುತ್ತಿನ ಕೆಲಸಗಳು ಮುಗಿದಿದ್ದು ಈಗ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ. ಇನ್ನು ಸಿನಿಮಾದಲ್ಲಿ ಪ್ರಾಣಿಗಳು ಪ್ರಮುಖ ಪಾತ್ರವಹಿಸುತ್ತವೆಯಾದ್ದರಿಂದ, ಪ್ರಾಣಿಗಳ ಬಳಕೆಗಾಗಿ ಪ್ರಾಣಿ ದಯಾ ಸಂಘದಿಂದ ಪರವಾನಿಗೆಗಾಗಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಲು ಸಾಕಷ್ಟು ಸಮಯ ತೆಗೆದಿರಿಸಬೇಕಾಯಿತು. ಕಂಪ್ಯೂಟರ್ ಗ್ರಾಫಿಕ್ಸ್ ಸಾಮಾನ್ಯ ಕೆಲಸವಲ್ಲ. ಪ್ರಾಣಿಗಳು ನಮಗೆ ಬೇಕಾದಂತೆ ನಟಿಸುವ ನಿರೀಕ್ಷೆ ಇಟ್ಟುಕೊಳ್ಳುವುದು ಅಸಾಧ್ಯ, ಹಾಗಾದಾಗ ಗ್ರಾಫಿಕ್ಸ್ ನಮಗೆ ಸಹಕರಿಸುತ್ತದೆ. ಒಂದು ಅಥವಾ ಎರಡು ಟೇಕ್ ಗಳಲ್ಲಿ ಒಪ್ಪಿಗೆಯಾಗುವ ಕೆಲಸ ಅದಲ್ಲ. ಬಹಳ ಬದಲಾವಣೆಗಳು ಬೇಕಾಗುತ್ತವೆ.

ಪ್ರಾಣಿಗಳು ಬಾಲ ಡಿಸುವುದನ್ನು ಸರಿಯಾಗಿ ತೋರಿಸಲು ಎರಡರಿಂದ ಮೂರು ವಾರ ಹಿಡಿಯುತ್ತದೆ. ನಾವು ಪ್ರಾಣಿಗಳನ್ನು ಬಳಸಬಹುದು ಆದರೆ ಪ್ರಾಣಿ ದಯಾ ಸಂಘದವರ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕಾಗುತ್ತದೆ. ಇವೆಲ್ಲಾ ಚಿತ್ರ ತಡವಾಗಿರುವುದಕ್ಕೆ ಕಾರಣಗಳು ಎಂದು ವಿವರಿಸುತ್ತಾರೆ. ಸಿನಿಮಾ ತಡವಾದರೂ ಪ್ರೇಕ್ಷಕರಿಗೆ ಮನರಂಜನೆ ನೀಡುವುದು ಪಕ್ಕಾ ಎನ್ನುವ ಯೋಗರಾಜ್ ಭಟ್, ಹರಿಕೃಷ್ಣ ಸಂಗೀತ, ಚಿತ್ರದ ತಾರಾಗಣ ನೋಡುಗರ ಕುತೂಹಲವನ್ನು ಹಿಡಿದಿಟ್ಟಿದೆ. ದುನಿಯಾ ವಿಜಯ್ ಮುಖ್ಯ ಪಾತ್ರದಲ್ಲಿದ್ದು, ಪ್ರೇಕ್ಷಕರಿಗೆ ಆ್ಯಕ್ಷನ್ ರಸದೌತಣ ನೀಡಲಿದೆ ಎನ್ನುತ್ತಾರೆ. ನೋಡುಗರನ್ನು ಬೆರಗುಗೊಳಿಸುವ ಸ್ಟಂಟ್‍ಗಳು ಸಿನೆಮಾದಲ್ಲಿವೆ. ಸ್ಕ್ರಿಪ್ಟ್ ದೃಶ್ಯಗಳು ಹೀಗೆ ಇರಬೇಕೆಂದು ನಾವು ಆದರೆ ವಿಜಯ್ ತಂಡ ಸೇರಿದ ಮೇಲೆ ಸ್ಟಂಟ್‍ಗಳ ಸಂಖ್ಯೆ ಹೆಚ್ಚಾಯಿತು, ಹಿನ್ನೆಲೆ, ಗುಣಮಟ್ಟ ಹೆಚ್ಚಾಯಿತು ಎನ್ನುತ್ತಾರೆ. ಚಿತ್ರದ ಪ್ರಮುಖ ತಾರಾಗಣದಲ್ಲಿ ರಂಗಾಯಣ ರಘು, ಸುಚೇಂದ್ರ ಪ್ರಸಾದ್ ಮುಂದಾದವಿರಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin