ಬಾಹುಬಲಿ-2ಗಾಗಿ ಜಿಮ್‌ನಲ್ಲಿ ಬೆವರಿಳಿಸುತ್ತಿರುವ ರಾಣಾ

ಈ ಸುದ್ದಿಯನ್ನು ಶೇರ್ ಮಾಡಿ

DAGU
ಬ್ಲಾಕ್‌ಬಸ್ಟರ್ ಬಾಹುಬಲಿ ಸಿನಿಮಾದಲ್ಲಿ ಬಲ್ಲಾಳ ದೇವನ ಪಾತ್ರದಲ್ಲಿ ಮಿಂಚಿ ತಮ್ಮದೇ ಆದ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ರಾಣಾ ದಗ್ಗುಬಾಟಿ ಎರಡನೇ ಭಾಗಕ್ಕಾಗಿ ವಿಶೇಷ ಮುತುವರ್ಜಿಯಿಂದ ತಯಾರಿ ನಡೆಸುತ್ತಿದ್ದಾರೆ. ಬಾಹುಬಲಿ : ದಿ ಕನ್‌ಕ್ಲೂಷನ್ ಸಿನಿಮಾಕ್ಕಾಗಿ 6 ಅಡಿ 3 ಅಂಗುಲ ಎತ್ತರದ ಅಜನುಬಾಹು ರಾಣಾ ಜಿಮ್‌ನಲ್ಲಿ ಬೆವರಿಳಿಸುತ್ತಾ ಮೈಯನ್ನು ಹುರಿಗೊಳಿಸುತ್ತಿದ್ದಾರೆ. ತಾವು ನಡೆಸುತ್ತಿರುವ ಕಸರತ್ತಿನ ಫೋಟೋಗಳನ್ನು ಸಾಮಾಜಿಕ ಜಲತಾಣದಲ್ಲೂ ಪ್ರಕಟಿಸಿದ್ದಾರೆ. ಚಿತ್ರಕ್ಕಾಗಿ ತುಂಬಾ ಆಸಕ್ತಿಯಿಂದ ಸಜಗುತ್ತಿರುವ ದುಗ್ಗುಬಾಟಿಯ ಬದ್ಧತೆ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಮೊದಲ ಭಾಗದಲ್ಲಿ ಬಾಹುಬಲಿ ಪಾತ್ರದಾರಿ ಪ್ರಭಾಸ್‌ಗೆ ಸರಿಸಮನಾಗಿ ಮಿಂಚಿದ್ದರು ರಾಣಾ.

ಎರಡನೇ ಸ್ವೀಕೆಲ್‌ನಲ್ಲೂ ಅದನ್ನು ಮುಂದುವರಿಸಲು ಸಂಕಲ್ಪ ಮಾಡಿರುವ ರೀತಿಯಲ್ಲಿ ಯೋಧನ ಶಿಸ್ತಿನಂತೆ ಸಜಗುತ್ತಿದ್ದಾರೆ. ಬಾಹುಬಲಿ ವಿರುದ್ಧ ಕತ್ತಿ ಮಸೆಯುವ ಬಲ್ಲಾಳ ದೇವನ ಹಗೆತನ-ಮತ್ಸರ ಎರಡನೇ ಭಾಗದಲ್ಲೂ ಮುಂದುವರಿಯಲಿದೆ. ಎರಡನೇ ಸರಣಿಯು ಬಾಹುಬಲಿ ವರ್ಸಸ್ ಬಲ್ಲಾಳ ದೇವ ಆಗಲಿದೆಯೇ ಎಂಬುದನ್ನು ನೋಡಲು ಮುಂದಿನ ವರ್ಷ ಏಪ್ರಿಲ್‌ವರೆಗೆ ಅಭಿಮಾನಿಗಳು ಕಾಯಬೇಕು.

► Follow us on –  Facebook / Twitter  / Google+

Facebook Comments

Sri Raghav

Admin