ಬೆಳೆ ಕೈಕೊಟ್ಟಿದ್ದಕ್ಕೆ ರೈತ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

 

farmers

ಚಿತ್ರದುರ್ಗ, ಅ.6- ಮೆಕ್ಕೆಜೋಳ ಬೆಳೆ ಕೈಕೊಟ್ಟ ಹಿನ್ನೆಲೆಯಲ್ಲಿ ನೊಂದ ರೈತ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕು ಯದ್ಲಗಟ್ಟೆ ಗ್ರಾಮದಲ್ಲಿ ನಡೆದಿದೆ.ವೀರೇಶ್ (26) ಮೃತ ರೈತ.ಸುಮಾರು 3 ಎಕರೆ ಜಮೀನು ಹೊಂದಿರುವ ಈತ ನೀರಿಗಾಗಿ 6 ಬಾರಿ ಕೊಳವೆ ಬಾವಿ ಕೊರೆಸಿದ್ದ. ಆದರೆ, ಒಂದರಲ್ಲಿ ಮಾತ್ರ ನೀರು ಬಂದಿತ್ತು. ಬರದ ಹಿನ್ನೆಲೆಯಲ್ಲಿ ಅದೂ ಕೂಡ ಬತ್ತಿತ್ತು. ಇದರಿಂದ ಬೆಳೆ ಕೂಡ ಕೈಕೊಟ್ಟಿತ್ತು ಎನ್ನಲಾಗಿದೆ.ವಿವಿಧ ಬ್ಯಾಂಕ್‍ಗಳಲ್ಲಿ ಮಾಡಿದ್ದ ಸಾಲ ತೀರಿಸುವುದು ಹೇಗೆ ಎಂದು ಆತಂಕಗೊಂಡಿದ್ದ. ನಿನ್ನೆ ರಾತ್ರಿ ವಿಷ ಕುಡಿದಿದ್ದಾರೆ ಎಂದು ಆತನ ಸ್ನೇಹಿತರು ತಿಳಿಸಿದ್ದಾರೆ. ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

 

 

► Follow us on –  Facebook / Twitter  / Google+

 

 

Facebook Comments

Sri Raghav

Admin