ಸಚಿವರ ಮನೆಗೆ ಅಂಬೇಡ್ಕರ್ ಸೇನೆ ಮುತ್ತಿಗೆ

ಈ ಸುದ್ದಿಯನ್ನು ಶೇರ್ ಮಾಡಿ

murthy

ಬೆಂಗಳೂರು,ಅ.6-ಅಹಿಂದ ಪರ ಎಂದು ಹೇಳಿಕೊಳ್ಳುವ ಸರ್ಕಾರ ಮುಖ್ಯ ಕಾರ್ಯದರ್ಶಿ ನೇಮಕದಲ್ಲಿ ತಾರತಮ್ಯ ಮಾಡಿ ವಂಚಿಸಿದೆ ಎಂದು ಅಂಬೇಡ್ಕರ್ ಸೇನೆ ಇಂದು ಸಚಿವರುಗಳ ನಿವಾಸಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತ ಪಡಿಸಿದರು.ದಲಿತ ಸಮುದಾಯದಿಂದ ಬಂದಂತಹ ರತ್ನಪ್ರಭಾ ಅವರ ನಿಷ್ಠಾವಂತ ಹಾಗೂ ಪಾರದರ್ಶಕ ಸೇವೆಯನ್ನು ಪರಿಗಣಿಸದೆ ಕಡೆಗಣಿಸಲಾಗಿದೆ. ಹಲವಾರು ದಲಿತ ಸಂಘಟನೆಗಳು ಸೇರಿದಂತೆ ಸರ್ಕಾರಕ್ಕೆ ಎಷ್ಟೇ ಮನವಿ ಮಾಡಿ, ತಿಳಿ ಹೇಳಿದರೂ ಅದನ್ನು ಕಸದ ಬುಟ್ಟಿಗೆ ಹಾಕಿ ನಿರ್ಲಕ್ಷಿಸಲಾಗಿದೆ ಎಂದು ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಪಿ.ಮೂರ್ತಿ ಬೇಸರ ವ್ಯಕ್ತ ಪಡಿಸಿದರು.

ಅದರಲ್ಲೂ ದಲಿತ ಮಹಿಳೆಯನ್ನು ಮುಖ್ಯ ಕಾರ್ಯದರ್ಶಿ ನೀಡಿದ್ದರೇ ಸರ್ಕಾರದ ಘನತೆ ಹೆಚ್ಚುತ್ತಿತ್ತು. ಆದರೆ ಸರ್ಕಾರ ಅದನ್ನು ಕಳೆದುಕೊಂಡಿದೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಎಲ್ಲೋ ರಾಜ್ಯ ಸರ್ಕಾರ ಮಂಕು ಬೂದಿ ಎರಚುತ್ತಿದೆ ಎಂಬಂತೆ ಕಾಣುತ್ತಿದೆ ಎಂದು ದೂರಿದರು.ಗೃಹ ಸಚಿವ ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಆಂಜನೇಯ, ಲೋಕೋಪಯೋಗಿ ಸಚಿವ ಹೆಚ್.ಸಿ. ಮಹದೇವಪ್ಪ, ಪ್ರಿಯಾಂಕ ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕಿ ದಲಿತರ ಪರ ತಾವು ನಿಲ್ಲಲಿಲ್ಲ ಎಂದು ನೂರಾರು ಕಾರ್ಯಕರ್ತರು ಘೋಷಣೆಗಳನ್ನು ಕೂಗಿದ್ದಾರೆ.ಇದೇ ವೇಳೆ ಸಚಿವರು ಸಮಾಧಾನ ಪಡಿಸಲು ಪ್ರಯತ್ನಿಸಿ ಮುಂದಿನ ದಿನಗಳಲ್ಲಿ ಸಮುದಾಯಕ್ಕೆ ದೊರೆಯಬೇಕಾದ ಸಲವತ್ತುಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin