ಮೊಬೈಲ್ ಕಾಲ್ ಮಾಡಿ ಕರೆಸಿಕೊಂಡು ಕೊಲೆ ಮಾಡಿದರು …!

ಈ ಸುದ್ದಿಯನ್ನು ಶೇರ್ ಮಾಡಿ

Call-01

ಬೆಂಗಳೂರು, ಅ.8– ನಿವೇಶನ ವಿವಾದದ ಹಿನ್ನೆಲೆಯಲ್ಲಿ ದಾಯಾದಿಗಳ ನಡುವಿನ ಜಗಳಕ್ಕೆ ಯುವಕನೊಬ್ಬ ಬಲಿಯಾಗಿರುವ ಘಟನೆ ಡಿ.ಜೆ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದೊಡ್ಡಣ್ಣನಗರ ನಿವಾಸಿ ಸ್ಟ್ಯಾಲಿ(28) ಕೊಲೆಯಾದ ಯುವಕ. ಈತನ ಮನೆ ಸಮೀಪ ಅಜ್ಜಿಯ ಸೈಟ್ ಇದ್ದು, ಈ ವಿಚಾರವಾಗಿ ದೊಡ್ಡಪ್ಪನ ಮಕ್ಕಳು ಹಾಗೂ ಈತನ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು ಎನ್ನಲಾಗಿದೆ. ಕ್ಯಾಟರಿಂಗ್ ಕಾಂಟ್ರ್ಯಾಕ್ಟರ್ ಆಗಿದ್ದ ಸ್ಟ್ಯಾಲಿ ರಾತ್ರಿ 10 ಗಂಟೆಯಲ್ಲಿ ಮನೆಯಲ್ಲಿದ್ದಾಗ ಈತನ ಮೊಬೈಲ್ಗೆ ದೊಡ್ಡಪ್ಪನ ಮಗ ಮದÀನ್ ಎಂಬಾತ ಕರೆ ಮಾಡಿ ನಿನ್ನ ಜತೆ ಮಾತನಾಡಬೇಕು, ಬರುವಾಗ ಸ್ವಲ್ಪ ಹಣ ತೆಗೆದುಕೊಂಡು ಎನ್.ಪಿ.ಕಾರ್ಖಾನೆ ಬಳಿ ಬರುವಂತೆ ಹೇಳಿದ್ದಾನೆ.

ಅದರಂತೆ ಸ್ಟ್ಯಾಲಿ ಮನೆಯಿಂದ ಹೋಗಿದ್ದಾಗ ಚಾಕುವಿನಿಂದ ದುಷ್ಕರ್ಮಿಗಳು ಎದೆ ಮತ್ತು ಪಕ್ಕೆಗೆ ಮನಬಂದಂತೆ ಇರಿದು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಈತನನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರು ಹಾಗೂ ಮನೆಯವರಿಗೆ ತಿಳಿಸಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ಈತನ ತಾಯಿ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನನ್ನ ಮಗ ರಾತ್ರಿ ಮನೆಯಲ್ಲಿದ್ದಾಗ ಮದನ್ ಮತ್ತಿತರರು ದೂರವಾಣಿ ಕರೆ ಮಾಡಿ ಕರೆಸಿಕೊಂಡು ಕೊಲೆ ಮಾಡಿದ್ದಾರೆ ಎಂದು ಶಂಕಿಸಿ ದೂರು ನೀಡಿದ್ದಾರೆ.
ಶವವನ್ನು ಅಂಬೇಡ್ಕರ್ ಮೆಡಿಕಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಡಿ.ಜೆ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin