ವಿಶ್ವಪ್ರಸಿದ್ದ ಜಂಬೂಸವಾರಿಗೆ ಕ್ಷಣಗಣನೆ : ಆನೆಗಳ ಭರ್ಜರಿ ತಾಲೀಮು

ಈ ಸುದ್ದಿಯನ್ನು ಶೇರ್ ಮಾಡಿ

Dasara

ಮೈಸೂರು, ಅ.8– ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಅಂಬಾರಿ ಹೊರುವ ಅರ್ಜುನ ಸೇರಿದಂತೆ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಎಲ್ಲ ಆನೆಗಳಿಗೂ ಭರ್ಜರಿ ತಾಲೀಮು ನಡೆಸಲಾಯಿತು. ಇದೇ 11ರಂದು ನಡೆಯುವ ಜಂಬೂಸವಾರಿ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿಂದ ಜಂಬೂಸವಾರಿಯ ತಾಲೀಮು ನಡೆಯಲಾಯಿತು. ತಾಲೀಮಿನಲ್ಲಿ ಅರಮನೆ ಮುಂದೆ ನಿರ್ಮಿಸಲಾಗಿರುವ ವಿಶೇಷ ವೇದಿಕೆಯಲ್ಲಿ ಶಾಸಕ ಸೋಮಶೇಖರ್ ಪರೇಡ್ ಸ್ವೀಕರಿಸಿದರು. ಸಿಎಆರ್ ದಳ, ಕೆಎಸ್ಆರ್ಪಿ, ಅಶ್ವದಳ, ಪೊಲೀಸ್ ಬ್ಯಾಂಡ್, ಹೋಂಗಾರ್ಡ್ ಸೇರಿದಂತೆ ಹಲವು ಸೇವಾ ಪಡೆಗಳು ಪಥ ಸಂಚಲನ ನಡೆಸಿದವು.2eecf43a-f0d3-4d1d-89ac-c611bbb997fe

ಗಜ ಪಡೆಯ ಅರ್ಜುನನೊಂದಿಗೆ ಇತರೆ ಆನೆಗಳು ಪಥ ಸಂಚಲನ ನಡೆಸಿದವು. ವಿಶೇಷ ವೇದಿಕೆಯಲ್ಲಿ ಅರ್ಜುನ ಬಂದು ನಿಂತಾಗ ಶಾಸಕ ಸೋಮಶೇಖರ್ ಪುಷ್ಪಾರ್ಚನೆ ಮಾಡಿದರು.

ಕುಶಾಲತೋಪಿನಿಂದ ಹಾನಿ: 
ದೇ ಸಂದರ್ಭದಲ್ಲಿ ಅರಮನೆಯ ಹೊರ ಆವರಣದಲ್ಲಿರುವ ಮಾರಮ್ಮನ ದೇವಾಲಯದ ಬಳಿ ಪೂರ್ವ ತಾಲೀಮಿನ ವೇಳೆ ಕುಶಾಲ ತೋಪು ಸಿಡಿಸಲಾಯಿತು.  ಸಶಸ್ತ್ರ ಮೀಸಲು ಪಡೆಯವರು 21 ಬಾರಿ ಕುಶಾಲತೋಪು ಸಿಡಿಸಿದ ಪರಿಣಾಮ ಭಾರೀ ಶಬ್ಧ ಉಂಟಾಗಿ ವಾಹನಗಳ ನಿಲುಗಡೆಯ ಟಿಕೆಟ್ ಕೌಂಟರ್ನ ಗಾಜು ಪುಡಿಪುಡಿಯಾಗಿದೆ.

4a7a123e-ff9e-4f49-89e3-9bd965a08911

► Follow us on –  Facebook / Twitter  / Google+

Facebook Comments

Sri Raghav

Admin