3ನೇ ಟೆಸ್ಟ್’ನಲ್ಲಿ ಭಾರತದ ವಿರುದ್ಧ ಕಿವೀಸ್ ಮೇಲುಗೈ

ಈ ಸುದ್ದಿಯನ್ನು ಶೇರ್ ಮಾಡಿ

Tesat

ಇಂದೋರ್,ಅ.8-ಇಲ್ಲಿನ ಇಂದೋರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‍ನಲ್ಲಿ ಕ್ಲೀನ್‍ಸ್ವಿಪ್ ಮಾಡುವ ತವಕದಲ್ಲಿರುವ ಅತಿಥೇಯ ಭಾರತ ಆಘಾತ ಅನುಭವಿಸಿದೆ. ಪ್ರವಾಸಿ ನ್ಯೂಜಿಲೆಂಡ್ ಬೌಲರ್‍ಗಳು ಪ್ರಾಬಲ್ಯ ಸಾಧಿಸುತ್ತಿದ್ದು, ಇತ್ತ ಭಾರತದ ಬ್ಯಾಟ್ಸ್‍ಮನ್‍ಗಳು ಪ್ರತಿರೋಧ ಒಡ್ಡುತ್ತಿದ್ದಾರೆ. ಇಂದೋರ್ ಕ್ರೀಡಾಂಗಣದಲ್ಲಿ ಕಿವೀಸ್ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್’ನಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ.  ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಮುರುಳಿ ವಿಜಯ್ ಹಾಗೂ ಗೌತಮ್ ಗಂಭೀರ್ ಜೋಡಿಯು ಮೊದಲ ವಿಕೆಟ್ ಜೊತೆಯಾಟದಲ್ಲಿ 26ರನ್ ದಾಖಲಿಸಿದರು. ಆದರೆ ಪ್ರವಾಸಿ ಬೌಲರ್‍ಗಳು ಮುರುಳಿ ವಿಜಯ್ ವಿಕೆಟ್ ಕೀಳುವ ಮೂಲಕ ಜೋಡಿಗೆ ಬ್ರೇಕ್ ಹಾಕಿದರು.  ಈ ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ವಿಜಯ್ 10 ರನ್ ಗಳಿಸಿ ಜೀತನ್ ಪಟೇಲ್ ಬೌಲಿಂಗ್‍ನಲ್ಲಿ ಲಾಥನ್‍ಗೆ ಕ್ಯಾಚ್ ನೀಡಿ ಔಟಾದರು.

ಆರಂಭದಲ್ಲೇ ವಿಕೆಟ್ ಕಳೆದುಕೊಂಡ ಭಾರತ ಆಘಾತ ಅನುಭವಿಸಿತು. ಈ ಸಂದರ್ಭದಲ್ಲಿ ಕ್ರೀಸ್‍ಗಿಳಿದ ಪೂಜಾರ ಹಾಗೂ ಗೌತಮ್ ಗಂಭೀರ್ ಜೋಡಿಯು 2ನೇ ವಿಕೆಟ್ ಜೊತೆಯಾಟದಲ್ಲಿ 34 ರನ್ ಸೇರಿಸಿ ಕಿವೀಸ್ ಬೌಲರ್‍ಗಳಿಗೆ ಸ್ವಲ್ಪ ಹೊತ್ತು ಪ್ರತಿರೋಧ ನೀಡಿದರು. ಗೌತಮ್ ಗಂಭೀರ್ 29 ರನ್ ಗಳಿಸಿ ಕ್ರೀಸ್‍ನಲ್ಲಿ ಗಟ್ಟಿಯಾಗಿ ನೆಲೆಯೂರುತ್ತಿರುವಾಗಲೇ ಬೌಲ್ಟ್ ಬೌಲಿಂಗ್‍ಗೆ ಎಲ್‍ಬಿಡಬ್ಲ್ಯೂ ಬಲೆಗೆ ಬಿದ್ದರು.  ಸತತ ಎರಡು ವರ್ಷಗಳ ಕಾಲ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದ ಗೌತಮ್ ಗಂಭೀರ್ ಆರಂಭಿಕರಾಗಿ ಕಣಕ್ಕಿಳಿದು ಕೇವಲ 29 ರನ್ ಗಳಿಸಿ ನಿರಾಸೆ ಮೂಡಿಸಿದರು.

60 ರನ್ ಒಳಗೆ ಆರಂಭಿಕರು ಔಟಾಗಿ ಪೆವಿಲಿಯನ್ ಸೇರಿದ್ದರಿಂದ ಭಾರತಕ್ಕೆ ಇನ್ನಷ್ಟು ಒತ್ತಡಕ್ಕೊಳಗಾಯಿತು. ಮೊದಲ ಅವಧಿಯಲ್ಲೇ ಪ್ರವಾಸಿ ಬೌಲರ್‍ಗಳು ಪ್ರಾಬಲ್ಯ ಸಾಧಿಸಿದರು.
ಬಳಿಕ ಕ್ರೀಸ್‍ಗೆ ಆಗಮಿಸಿದ ನಾಯಕ ವಿರಾಟ್ ಕೊಹ್ಲಿಯು ಪೂಜಾರಗೆ ಸಾಥ್ ನೀಡುತ್ತಿದ್ದಾರೆ. ಇತ್ತ ಪೂಜಾರ ಕಿವೀಸ್ ಬೌಲರ್‍ಗಳನ್ನು ಸಮರ್ಥವಾಗಿ ಎದುರಿಸಿ 41 ರನ್ ಗಳಿಸಿ ಸ್ನಾಟರ್ ಬೌಲಿಂಗ್‍ನಲ್ಲಿ ವಿಕೆಟ್ ಒಪ್ಪಿಸಿದರು.  ಕೊಯ್ಲಿ ಅಜೇಯ 32, ರಹಾನೆ ಅಜೇಯ 3 ರನ್‍ಗಳಿಸಿ ಕ್ರೀಸ್‍ನಲ್ಲಿದ್ದಾರೆ.  ಮಧ್ಯಾಹ್ನದ ವೇಳೆಗೆ ಭಾರತ 46.2 ಓವರ್‍ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿದೆ.

ಮೊದಲ ಅವಧಿಯಲ್ಲಿ ಕಿವೀಸ್ ಪ್ರಾಬಲ್ಯ: ಈಗಾಗಲೇ ಸರಣಿ ಸೋಲು ಅನುಭವಿಸಿದ ಪ್ರವಾಸಿ ತಂಡ ಅಂತಿಮ ಟೆಸ್ಟ್‍ನಲ್ಲಿ ಶತಾಯಗತಾಯ ಹೋರಾಟ ನಡೆಸಿ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದು , 3ನೇ ಟೆಸ್ಟ್ ಗೆದ್ದು ಮಾನ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ. ಹೀಗಾಗಿ ಕಿವೀಸ್ ಬೌಲರ್‍ಗಳು ಭಾರತಕ್ಕೆ ಆರಂಭದಲ್ಲೇ ಆಘಾತ ನೀಡುವ ಮೂಲಕ ಮೇಲುಗೈ ಸಾಧಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin